ಶನಿವಾರ, ಆಗಸ್ಟ್ 13, 2011

ರಕ್ಷಾಬಂಧನ

ರಕ್ಷಾಬಂಧನ

ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಬಾಂಧವ್ಯಗಳು ನಲ್ಮೆಯ ಹಿತ ಭಾವಗಳಿಂದ ನಿತ್ಯ ಹಸುರಾಗಿರಲಿ.  ನಮ್ಮ ಹೃದಯಾಂತರಾಳಗಳಲ್ಲಿನ ಆಂತರ್ಯದ ದಿವ್ಯತೆಯಲ್ಲಿ ಎಂದೆಂದೂ ಸುರಕ್ಷಿತವಾಗಿರಲಿ.  ನಮ್ಮ ನಿಮ್ಮೆಲ್ಲರ ಈ ಸುಮಧುರ ಬಾಂಧವ್ಯ ಲೋಕದ ದುಃಖವನ್ನು ಇಲ್ಲವಾಗಿಸಿ, ಸುಖ ಸೌಖ್ಯ ಶಾಂತಿ ಸಂತಸಗಳನ್ನು ನಿತ್ಯ ಚಿಮ್ಮಿಸುತ್ತಿರುವಂತಿರಲಿ.

ಸಾಮಾನ್ಯವಾಗಿ ನಾವು ಧಾರ್ಮಿಕವಾಗಿ ಉಪಾಕರ್ಮವೆಂಬ ಹಬ್ಬದ ಹೆಸರಿನಲ್ಲಿ ವಿಶ್ವದ ತೆಜಸ್ಸನ್ನು ಗಾಯತ್ರೀ ಮಂತ್ರದ ಮುಖೇನ ಆವಿರ್ಭವಿಸಿಕೊಂಡು ನಮ್ಮ ಮನಸ್ಸು ಬುದ್ಧಿಗಳು ಸರಿಯಾದ ದಿಕ್ಕಿನಲ್ಲಿ ಪ್ರಚೋದಿತಗೊಳ್ಳಲಿ ಎಂದು ಪ್ರಾರ್ಥಿಸುವ ದಿನ ಕೂಡಾ ಈ ರಕ್ಷಾಬಂಧನದ ದಿನದಂದೇ ಮೂಡುವುದು ಮತ್ತೊಂದು ವಿಶೇಷ.  ಹೀಗಾಗಿ ಪರಮಾತ್ಮನೆಂಬ ಶಕ್ತಿಯಿಂದ ಮೊದಲುಗೊಂಡು ನಮ್ಮ ಜೀವನದ ಎಲ್ಲಾ ಸಂಬಂಧಗಳಿಗೂ ನಲ್ಮೆಯಿಂದ  ಆದರದ ಗೌರವಗಳನ್ನು ಸಲ್ಲಿಸುವ ಈ ಸಂದರ್ಭದಲ್ಲಿ ನನ್ನನ್ನು ತಮ್ಮಲ್ಲಿ ಒಂದಾಗಿರಿಸಿಕೊಂಡಿರುವ ನನ್ನ ಕುಟುಂಬದವರಿಗೂ, ಈ ವಿಶ್ವವೆಂಬ ಕುಟುಂಬದಲ್ಲಿ ನನ್ನನ್ನು ಆತ್ಮೀಯವಾಗಿರಿಸಿಕೊಂಡಿರುವ ನನ್ನ ಎಲ್ಲಾ ಸಹೋದರ ಸಹೋದರಿಯರಿಗೂ ಗೌರವ ಸಲ್ಲಿಸುತ್ತಾ 'ರಕ್ಷಾಬಂಧನ' ಹಬ್ಬದ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.


ನಮ್ಮೆಲ್ಲರ ಸವಿ ಬಾಂಧವ್ಯವೇ ನಮಗಿರುವ ಶ್ರೀರಕ್ಷೆ. ಈ ಬಾಂಧವ್ಯದ ಸವಿ ಎಲ್ಲೆಲ್ಲೂ ಪ್ರವಹಿಸುತ್ತಲೇ ಇರಲಿ.

Tag: Rakshabandhan

ಕಾಮೆಂಟ್‌ಗಳಿಲ್ಲ: