ಸೋಮವಾರ, ಆಗಸ್ಟ್ 26, 2013

ಮದರ್ ತೆರೇಸಾ

ಮದರ್ ತೆರೇಸಾ

ತಾಯಿ ತೆರೇಸಾ ಅವರು ಹುಟ್ಟಿದ ದಿನ ಆಗಸ್ಟ್ 261910ರಿಂದ 1997ರ ಅವಧಿಯಲ್ಲಿ ಜೀವಿಸಿದ್ದ ಈ ತಾಯಿ, ಪ್ರೀತಿಯ ಕೊರತೆಯಿದ್ದವರಿಗೆ ಹಂಚಿದ ಪ್ರೀತಿಯ ಸಿಂಚನ ಮತ್ತು ಆ ಸಿಂಚನಗಳು  ವ್ಯಾಪಿಸಿದ ಸೀಮಾತೀತ ಗಡಿಗಳು ಅಸಂಖ್ಯವಾದದ್ದು.

ಮಾತೆ ತೆರೇಸಾ ಅವರ ಕೆಲವೊಂದು ನುಡಿಮುತ್ತುಗಳು ಇಂತಿವೆ: 

-ಜೀವನದಲ್ಲಿ ಪುಟ್ಟ ಪುಟ್ಟ ಸಂಗತಿಗಳಿಗೂ  ನಿಷ್ಠಾವಂತರಾಗಿರೋಣರಾಗಿರೋಣ.   ಅವೇ ನಮ್ಮನ್ನು ಶಕ್ತಿವಂತರನ್ನಾಗಿಸುತ್ತದೆ.

-ಜೀವನದಲ್ಲಿ ಯಾರಿಗೂ ಬೇಡವಾಗಿರುವುದು, ಪ್ರೀತಿ ದೊರಕದಿರುವುದು, ನೋಡಿಕೊಳ್ಳುವವರಿಲ್ಲದಿರುವುದು, ಕೇಳುವವರಿಲ್ಲದಿರುವುದು, ಎಲ್ಲರಿಂದಲೂ ನಿರ್ಲಕ್ಷ್ಯಕ್ಕೊಳಗಾಗಿರುವುದು ಇವು ಎಲ್ಲಾ ಹಸಿವುಗಳಿಗಿಂತ ಭೀಕರವಾದುದು; ತಿನ್ನುವುದಕ್ಕಿಲ್ಲ ಎಂಬುದಕ್ಕಿಂತ ಅದು  ಬಹು ದೊಡ್ಡದಾದ ಬಡತನ.

-ನಾಯಕರಿಗಾಗಿ ಕಾದು ಕುಳಿತುಕೊಳ್ಳುವುದು ಬೇಡ. ಒಬ್ಬರೇ ಮಾಡೋಣ. ಒಬ್ಬರಿಗೊಬ್ಬರು ಮಾಡೋಣ.

-ದೇವರು ನಮ್ಮನ್ನು ಯಶಸ್ವಿಯಾಗಿ ಮಾಡಿ ಮುಗಿಸಲೇಬೇಕೆಂದು ಒತ್ತಾಯಿಸುತ್ತಿಲ್ಲನಾವು ಪ್ರಯತ್ನಿಸಬೇಕೆಂಬುದಷ್ಟೇ  ಆತನ ಇಚ್ಛೆ.

-ನಾನು, ಈ ಲೋಕಕ್ಕೆ ಪ್ರೇಮ ಪತ್ರ ಬರೆಯುತ್ತಿರುವ  ಪರಮಾತ್ಮನ ಕೈಯಲ್ಲಿರುವ, ಒಂದು ಸಣ್ಣ ಪೆನ್ಸಿಲ್ಲು.

-ನಾನು ಪ್ರಾರ್ಥಿಸುವುದು ಯಶಸ್ಸನ್ನಲ್ಲ, ಶ್ರದ್ಧೆಯನ್ನು

-ನನಗೆ ನಿರ್ವಹಿಸಲಸಾಧ್ಯವಾದ ಯಾವೊಂದೂ ಜವಾಬ್ದಾರಿಯನ್ನೂ ದೇವರು ನನಗೆ ನಿರ್ವಹಿಸಲು ಹೇಳುವುದಿಲ್ಲ.  ಆತನಿಗೆ ನನ್ನ ಮೇಲೆ ಅಷ್ಟೊಂದು ಭರವಸೆ ಇದೆ ಎಂದು  ನನಗನ್ನಿಸುವುದಿಲ್ಲ.

-ನಮ್ಮಲ್ಲಿ ಶಾಂತಿಯಿಲ್ಲ ಎಂಬುದಕ್ಕೆ ಕಾರಣವಿಷ್ಟೇ, ನಾವು ಒಬ್ಬರಿಗೊಬ್ಬರು ಸೇರಿದವರು ಎಂಬುದನ್ನು ನಾವು ಮರೆತುಬಿಟ್ಟಿದ್ದೇವೆ.

-ನೀವು ಜನರ ಕುರಿತು ಅವರು ಸರಿಯೋ ಅಲ್ಲವೋ ಎಂದು ನಿರ್ಣಯಿಸುತ್ತಾ ಇದ್ದರೆ, ಅವರನ್ನು ಪ್ರೀತಿಸಲು ಸಮಯವೇ ಸಿಗುವುದಿಲ್ಲ. 

-ಬೇಗ ಬೇಗ ನಡೆಯುವುದು ಮತ್ತು ಅಸಂತೋಷದಿಂದಿರುವುದು, ಇವೆರಡೂ ಒಟ್ಟಿಗೆ ಸಂಭವಿಸುವುದು ಸಾಧ್ಯವಿಲ್ಲ. 

-ಸವಿ ದೇವರೇ, ನಾನು ನನ್ನ ಕರ್ತ್ಯವ್ಯಕ್ಕಿರುವ ಘನತೆಯನ್ನು ಅರ್ಥೈಸುವಂತೆ  ಮಾಡು.  ಈ ಕರ್ತವ್ಯದೊಡನಿರುವ ಜವಾಬ್ಧಾರಿಗಳನ್ನು ಗೌರವಿಸುವಂತೆ ಮಾಡು.  ಅದನ್ನು ನಾನು ನಿರ್ಲಕ್ಷ, ಅವಿಧೇಯತೆ, ಅಸಹನೆ, ನಿಧಾನತೆ, ತಿರಸ್ಕಾರಗಳಿಂದ ಅಗೌರವಿಸುವುದಕ್ಕೆ ಎಂದೂ ಆಸ್ಪದ ಕೊಡಬೇಡ.

-ನಾವು ಯಾವುದೇ ಕೆಲಸವನ್ನೂಕೇವಲ ಮಾಡಲೇಬೇಕಾದ ಅನಿವಾರ್ಯತೆಯಿಂದ ಮಾತ್ರ  ಮಾಡುವ ಅಪಾಯವಿದೆ.  ಇಂತಹ ಸಂದರ್ಭಗಳಲ್ಲಿ   ನಾವು ಪರಮಾತ್ಮನಿಗಾಗಿ ಮಾಡುತ್ತಿದ್ದೇವೆ, ಆದ್ದರಿಂದಲೇ ನಾವು ಅದನ್ನು ಆದಷ್ಟೂ  ಸುಂದರವಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂಬ  ಗೌರವ, ಪ್ರೀತಿ ಮತ್ತು ಸಮರ್ಪಣಾ ಮನೋಭಾವಗಳು”  ಇದ್ದಲ್ಲಿ ಅವು ನಮ್ಮ ಬದುಕಿನ ಮೌಲ್ಯವನ್ನು ವೃದ್ಧಿಗೊಳಿಸುತ್ತವೆ.


ಮದರ್ ತೆರೇಸಾ ಎಂಬ ಮಹಾನ್ ಚೇತನದ ಚರಣಕ್ಕೆ ನಮ್ಮ ನಮನಗಳು.

Tag: Mother Teresa

ಕಾಮೆಂಟ್‌ಗಳಿಲ್ಲ: