ಗುರುವಾರ, ಆಗಸ್ಟ್ 29, 2013

ಮಾಧುರಿ ದೀಕ್ಷಿತ್


ಮಾಧುರಿ ದೀಕ್ಷಿತ್

ಮೇ 15 ಮಾಧುರಿ ದೀಕ್ಷಿತ್ ಹುಟ್ಟಿದ ಹಬ್ಬ. ಸೌಂಧರ್ಯ, ಕಲೆ, ಅಭಿನಯ ಸಾಮರ್ಥ್ಯ, ಅಭಿವ್ಯಕ್ತಿ, ಪ್ರತಿಭೆ, ಸೃಜನೆ ಮತ್ತು ಇಂಥಹ ಹಲವಾರು ಗುಣಗಳನ್ನು ಮೇಳೈಸಿದ, ಆಕರ್ಷಣೀಯ ಪ್ರಸನ್ನತೆಯನ್ನು ಒಳಗೊಂಡ ನಟಿ ಮಾಧುರಿ ದೀಕ್ಷಿತ್.

ಒಮ್ಮೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಕೀರ್ತಿ ತಂದ ಸುಶ್ಮಿತಾ ಸೇನ್ ಅವರನ್ನು ಸಂದರ್ಶನದಲ್ಲಿ ಒಬ್ಬ ಸಂದರ್ಶಕರು ಕೇಳಿದರು."ನೀವು ನಿಮ್ಮನ್ನು ಸೌಂದರ್ಯವತಿ ಎಂದು ಭಾವಿಸಿದ್ದೀರ?" ಆಕೆಯ ಉತ್ತರ ಮಾರ್ಮಿಕವಾಗಿತ್ತು.  "ಕೇವಲ ಸೌಂಧರ್ಯ ಸ್ಪರ್ಧೆಯಲ್ಲಿ ಗೆದ್ದವರು ಮಾತ್ರವೇ ಸೌಂದರ್ಯವತಿಯರಲ್ಲ.    ನನ್ನ ಪ್ರಕಾರ ಮಾಧುರಿ ದೀಕ್ಷಿತ್ ಮಹಾನ್ ಸೌಂದರ್ಯವತಿ ಮಾತ್ರ ಅಲ್ಲ.  ಆಕೆ ಮಹಾನ್ ಪತಿಭಾವಂತೆ ಕೂಡಾ". 

ಬಹಳಷ್ಟು ವೇಳೆ ಹಿಂದಿ ಚಿತ್ರರಂಗದಲ್ಲಿ ಮಾಧುರಿ ದೀಕ್ಷಿತ್ ಅಭಿನಯಿಸಿದ ಚಿತ್ರಗಳಲ್ಲಿ, ಆಕೆಯ ನಗೆ ಮೊಗ, ಮುಗ್ಧ ಸೌಂಧರ್ಯ ಮತ್ತು ಅಭಿವ್ಯಕ್ತಿತೆಯ ನವುರ ತಾಣದ ಮುಂದೆ ಆಕೆಯ ಜೊತೆ ನಟಿಸಿದ ಪ್ರಸಿದ್ಧ ನಟರು ಕೂಡಾ ಪಿಚ್ಚೆನಿಸಿದ್ದೇ ಹೆಚ್ಚು.  ಅಷ್ಟೊಂದು ಪ್ರಭಾವಿತ ಉಪಸ್ಥಿತಿ  ಆಕೆಯದು. ನೃತ್ಯಭಾವಾಭಿನಯ, ಸೌಂದರ್ಯಾಭಿವ್ಯಕ್ತಿಗಳಲ್ಲಿ ಆಕೆಗೆ ಆಕೆಯೇ ಪ್ರತಿಸ್ಪರ್ಧಿ.

ನಿವೃತ್ತಿಯಾದ ನಂತರದಲ್ಲಿ  ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ನಟಿಸಿರುವ ಅವರು ಪುನಃ ಚಿತ್ರರಂಗಕ್ಕೆ ಪ್ರವೇಶ ಮಾಡುವಲ್ಲಿ ಮಹತ್ವವೆಂಬಂತ ಯಶಸ್ಸು ಕಂಡಿಲ್ಲ  ಎಂಬ ಅಂಶದ ಹೊರತು ಆಕೆ ಚಿತ್ರರಂಗದಲ್ಲಿ ನಿರತವಾಗಿದ್ದ ದಿನಗಳಲ್ಲಿ ಮತ್ತು ಆಕೆಯ ಹಿಂದೆ ಮತ್ತು ಮುಂದಿನ ಯಾವುದೇ ಪೀಳಿಗೆಗಳ ಹೋಲಿಕೆಯಲ್ಲಿ   ನಿಜಕ್ಕೂ ಮಹತ್ವದ ನಟಿ. 

ಮಾಧುರಿ ದೀಕ್ಷಿತ್ ಅಭಿಮಾನಿಗಳಿಗಾಗಿ ಮಾಧುರಿ ದೀಕ್ಷಿತ್ ಅಭಿಮಾನಿಯಾಗಿ ಈ ಸವಿನೆನಪು ಮತ್ತು ಮಾಧುರಿ ದೀಕ್ಷಿತ್ ಅವರಿಗೆ ಶುಭ ಹಾರೈಕೆ.Tag: Madhuri Dikshit

ಕಾಮೆಂಟ್‌ಗಳಿಲ್ಲ: