ಗುರುವಾರ, ಆಗಸ್ಟ್ 29, 2013

ಮಲ್ಲಿಕಾ ಸಾರಾಬಾಯ್

ಮಲ್ಲಿಕಾ ಸಾರಾಬಾಯ್

ಸುಪ್ರಸಿದ್ಧ ನೃತ್ಯ ಕಲಾವಿದೆ ಮಲ್ಲಿಕಾ ಸಾರಾಭಾಯ್  ಮೇ 9, 1953ರಂದು ಜನಿಸಿದರು.  ಶಾಸ್ತ್ರೀಯ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯ್ ಹಾಗು ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಪುತ್ರಿಯಾದ ಮಲ್ಲಿಕಾ, ಕೂಚಿಪುಡಿ ಮತ್ತು  ಭರತನಾಟ್ಯ ಶೈಲಿಯ ಪರಿಣತರು. ಜೊತೆಗೆ  ರಂಗಭೂಮಿ, ಕಿರುತೆರೆ, ಚಲನಚಿತ್ರ, ಬರವಣಿಗೆ ಹಾಗು ಮುದ್ರಣ ಕ್ಷೇತ್ರಗಳಲ್ಲಿ ಸಹಾ ಅವರ ಕೊಡುಗೆ ಸಂದಿದೆ. 

ಅಹಮದಾಬಾದಿನ ಸೈಂಟ್ ಜೇವಿಯರ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಮಲ್ಲಿಕಾ ಸಾರಾಬಾಯ್ ಪ್ರತಿಷ್ಠಿತ ಐ ಐ ಎಮ್ ಅಹಮದಾಬಾದಿನಿಂದ ಎಮ್.ಬಿ.ಎ ಪದವಿ ಮತ್ತು  ಗುಜರಾತ್ ವಿಶ್ವವಿದ್ಯಾಲಯದಿಂದ ಸಾಂಸ್ಥಿಕ ವ್ಯವಹಾರ ವಿಷಯಗಳ ಕುರಿತಾದ ಡಾಕ್ಟರೇಟ್ ಸಾಧನೆಗಳನ್ನು ಮಾಡಿದ್ದಾರೆ.   ಜೊತೆಗೆ ನಟನೆ, ಚಿತ್ರ-ನಿರ್ಮಾಣ, ಸಂಕಲನ ಹಾಗು ಕಿರುತೆರೆಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ  ಅನುಭವಗಳು ಸಹಾ ಅವರೊಂದಿಗಿದೆ.  ಬಾಲ್ಯದಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡ ಮಲ್ಲಿಕಾತಮ್ಮ 15ನೇ ವಯಸ್ಸಿನಿಂದಲೇ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಲು ತೊಡಗಿದರು.   ಪೀಟರ್ ಬ್ರೂಕ್ ಅವರ ಪ್ರಸಿದ್ಧ ರಂಗಪ್ರದರ್ಶನವಾದ  ದಿ ಮಹಾಭಾರತದಲ್ಲಿ ಮಲ್ಲಿಕಾ ದ್ರೌಪದಿಯ ಪಾತ್ರವನ್ನು ನಿರ್ವಹಿಸಿದ್ದರು.  ಮಲ್ಲಿಕಾ ಅವರು ತಮ್ಮ ತಾಯಿ ದಿವಂಗತೆ ಮೃಣಾಲಿನಿ ಅವರೊಂದಿಗೆ  ಸ್ಥಾಪಿಸಿದ  ದರ್ಪಣಾ ಅಕ್ಯಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ಸಂಸ್ಥೆಯನ್ನು ನಡೆಸುತ್ತಿದ್ದಾರೆ.

1989ರಲ್ಲಿ ಮಲ್ಲಿಕಾ ಅವರ ಏಕವ್ಯಕ್ತಿ ಪ್ರದರ್ಶನ ದಿ ಪವರ್ ಆಫ್ ವುಮೆನ್’  ಪ್ರಖ್ಯಾತಗೊಂಡಿತು.   ಪ್ರಸಕ್ತದ ವಿಷಯಗಳನ್ನು ಆಧರಿಸಿದ ಅಸಂಖ್ಯಾತ ಕಲಾ ಪ್ರದರ್ಶನಗಳನ್ನು ಸಹಾ ಇವರು ನಿರ್ದೇಶಿಸಿ ನಟಿಸಿದ್ದಾರೆ. ಇವುಗಳಲ್ಲಿ  ಮಲ್ಲಿಕಾ ಸಾರಾಭಾಯ್, ಹರ್ಷ್ ಮಂದರ್ ಅವರ ಕೃತಿ ಅನ್ಹರ್ಡ್ ವಾಯ್ಸಸ್ಅನ್ನು ಆಧರಿಸಿದ ಅನ್ಸುನಿ’,  ‘ಬರ್ಟೋಲ್ಟ್ ಬ್ರೆಚ್ಟ್ದಿ ಗುಡ್ ಪರ್ಸನ್ ಆಫ್ ಸಜೆಚವಾನ್ನಾಟಕದ ಭಾರತೀಯ ರೂಪಾಂತರವಾದ ಅಹ್ಮದಾಬಾದ್ ಕಿ ಔರತ್ ಭಲಿ-ರಾಮ್ಕಲಿ’  ಮುಂತಾದವು ಪ್ರಮುಖವೆನಿಸಿವೆ.  .


ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಮಲ್ಲಿಕಾ  ದಿ-ಗೋಲ್ಡನ್ ಸ್ಟಾರ್ ಪ್ರಶಸ್ತಿ1977ರಲ್ಲಿ ಥಿಯೇಟರ್ ಡೆ ಚಾಂಪ್ಸ್ ಎಲಿಸೀಸ್ನಿಂದ ಅತ್ಯುತ್ತಮ ನೃತ್ಯಗಾರ್ತಿ ಎಂಬ ಪ್ರಶಸ್ತಿಗಳನ್ನು ಪಡೆದವರಾಗಿದ್ದಾರೆ.   ವರ್ಲ್ಡ್ ಇಕನಾಮಿಕ್ ಫೋರಮ್ ನಿಂದ ಕ್ರಿಸ್ಟಲ್ ಪ್ರಶಸ್ತಿ, ಪಾಸ್ತಾ ಥಿಯೇಟರ್ ಪ್ರಶಸ್ತಿ, ಕಲಾ ಶಿರೋಮಣಿ ಪುರಸ್ಕಾರಫ್ರೆಂಚ್ ಸರ್ಕಾರದ ನೈಟ್ಸ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್  ಲೆಟರ್ಸ್ ಗೌರವ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಶೀಶಾ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ  ಪ್ರಶಸ್ತಿ, ‘ಮೇನಾ ಗುರ್ಜಾರಿ’  ಚಿತ್ರಕ್ಕಾಗಿನ ಅತ್ಯುತ್ತಮ ನಟಿ ಪ್ರಶಸ್ತಿ, ‘ಮುಟ್ಟಿ ಭರ್ ಚಾವಲ್ಚಿತ್ರದ ಅಭಿನಯಕ್ಕಾಗಿನ   ಅತ್ಯುತ್ತಮ ನಟಿ ಚಿತ್ರ ವಿಮರ್ಶಕರ ಪ್ರಶಸ್ತಿ ಮುಂತಾದ ಹಲವಾರು ಸಾಧನೆಗಳು ಮಲ್ಲಿಕಾ ಸಾರಾಬಾಯ್ ಅವರದ್ದಾಗಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ಸಹಾ ಅವರಿಗೆ ಸಂದಿದೆ.

Tag: Mallika Sarabhai

ಕಾಮೆಂಟ್‌ಗಳಿಲ್ಲ: