ಗುರುವಾರ, ಆಗಸ್ಟ್ 29, 2013

ಟಿ. ಎಮ್. ಸೌಂದರರಾಜನ್

ಟಿ. ಎಮ್. ಸೌಂದರರಾಜನ್ ಇನ್ನಿಲ್ಲ.

ದಕ್ಷಿಣ ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕರಾದ ಟಿ. ಎಮ್. ಸೌಂದರರಾಜನ್ ಅವರು ನಿನ್ನೆ ಮೇ 25, 2013ರಂದು  ನಿಧನರಾಗಿದ್ದಾರೆ.  ಟಿ ಎಮ್ ಎಸ್ ಎಂದೇ ಪ್ರಖ್ಯಾತರಾದ ಅವರಿಗೆ 91 ವರ್ಷ ವಯಸ್ಸಾಗಿತ್ತು.  ಟಿ ಎಮ್ ಸೌಂದರರಾಜನ್ ಅವರು 1923ರ ವರ್ಷದಲ್ಲಿ ಮಧುರೈ ಪಟ್ಟಣದಲ್ಲಿ ಜನಿಸಿದರು.

ಮುಂದೆ ಹೊಟ್ಟೆ ಪಾಡಿಗಾಗಿ ಮಧುರೈ ಬಿಟ್ಟು ಹೊರಟ ಟಿ ಎಮ್ ಎಸ್ ಅವರು ಕೊಯಂಬತ್ತೂರಿನ ರಾಯಲ್ ಟಾಕೀಸಿಗೆ ತಿಂಗಳಿಗೆ 50ರೂಪಾಯಿ ಸಂಭಳಕ್ಕೆ ಸೇರಿದರು.  1950ರ ವರ್ಷದಲ್ಲಿ ಅವರು ‘ಕೃಷ್ಣ ವಿಜಯಂ’ ಚಿತ್ರಕ್ಕೆ ಪ್ರಥಮ ಬಾರಿಗೆ ಹಿನ್ನೆಲೆಗಾಯಕರಾಗಿ ಹಾಡಿದರು.  ತಮಿಳು ನಾಡಿನ ಪ್ರಖ್ಯಾತ ಕಲಾವಿದರಾದ ಎಂ. ಜಿ. ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಅವರ ಬಹುತೇಕ ಚಿತ್ರಗಳಲ್ಲಿ ಟಿ ಎಮ್. ಸೌಂದರರಾಜನ್ ಅವರ ಗೀತೆಗಳು ಪ್ರಖ್ಯಾತಿ ಪಡೆದಿದ್ದವು.  ಪ್ರಾರಂಭದ ದಶಕಗಳಲ್ಲಿ ಅವರು ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಮುಂತಾದವರಿಗೆ   ಕನ್ನಡದಲ್ಲಿ ಸಹಾ ಹಿನ್ನೆಲೆ ಗಾಯನ ನೀಡಿದ್ದರು.   ರತ್ನಗಿರಿ ರಹಸ್ಯ, ಪ್ರೇಮ ಮಯಿ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ  ಟಿ. ಎಮ್. ಸೌಂದರರಾಜನ್ ಅವರ ಪ್ರಖ್ಯಾತ ಗೀತೆಗಳಿವೆ.   ಹಿಂದಿ ಮತ್ತು ದಕ್ಷಿಣ ಭಾರತದ ಎಲ್ಲ ಭಾಷೆಗಳನ್ನೂ ಸೇರಿದಂತೆ  ಸುಮಾರು 10,000ಕ್ಕೂ ಹೆಚ್ಚು ಚಿತ್ರಗೀತೆಗಳು ಮತ್ತು 3000ಕ್ಕೂ ಹೆಚ್ಚು ಭಕ್ತಿಗೀತೆಗಳನ್ನೂ ಹಾಡಿದ್ದ ಟಿ. ಎಮ್. ಸೌಂದರರಾಜನ್ ಅವರ 6 ದಶಕಗಳಿಗೂ ಹೆಚ್ಚು ಕಾಲದ ಗಾಯನ ಸೇವೆ ಅನುಪಮವಾದದ್ದು.

ಅಗಲಿದ ಈ ಹಿರಿಯ ಚೇತನಕ್ಕೆ ನಮ್ಮ ನಮನ.

Tag: T. M. Soundar Rajan

ಕಾಮೆಂಟ್‌ಗಳಿಲ್ಲ: