ಗುರುವಾರ, ಆಗಸ್ಟ್ 29, 2013

ವಿಶ್ವ ಪರಿಸರ ದಿನದಂದು


ದಿನದ ಪ್ರತಿಕ್ಷಣಗಳನ್ನೂ ಕಳೆದು
ಹುಡುಕುತ್ತೇವೆ ಹೊಸದಿನ.
ವರುಷದ ಎಲ್ಲಾ ದಿನಗಳಲ್ಲೂ ಕಳೆದುಹೋಗಿ
ಕಾಯುತ್ತೇವೆ ವರುಷಕ್ಕೊಂದು ಹೊಸದಿನ.

ಇರುವುದನ್ನೆಲ್ಲಾ ಹಾಳುಮಾಡಿ ಕರೆಯುತ್ತೇವೆ
"ಬಾ ನಮ್ಮ ಬದುಕಿಗೆ ನವೋದಯವೆ" ಎಂದು
ನಮ್ಮ ಸುತ್ತಮುತ್ತಲನ್ನೆಲ್ಲ ಕಸದರಾಶಿಯಾಗಿಸಿ
ಹೊರಟಿದ್ದೇವೆ ನವೋತ್ಸಾಹದ ಪ್ರವಾಸಕೆಂದು

ಇರುವುದೊಂದೇ ಭೂಮಿ, ಇರುವುದೊಂದೇ ಬದುಕು
ಇರುವುದೊಂದೇ ಆತ್ಮ,  ಇರುವುದೊಂದೇ ಜಗ
ನಮ್ಮನೆಲ ಕೊಳಕಿಸಿ, ಬದುಕು ನಿಲುಕೀತೆ?
ನಮ್ಮೊಳಗು ಕ್ಷೀಣಿಸುತಿರೆ, ಜಗವಿಸ್ತರಿಸೀತೆ?

ಪ್ರತೀಕ್ಷಣ ನಮ್ಮ ಜಗದಲ್ಲಿ ವಿಷವುಗುಳಿ
ವರ್ಷಕ್ಕೊಮ್ಮೆ ಹಸಿರ ತೋರಣಕ್ಕೆ ಎಲೆ ಹುಡುಕುವ
ಭಂಡ ಬದುಕು ನಿಲಿಸೋಣ,
ಸ್ವಚ್ಚ ಬದುಕಿನ ಬಾಳನ್ನು ತಪವಾಗಿಸೋಣ.

Tag: Vishwa Parisara Dina, World Environment Day

ಕಾಮೆಂಟ್‌ಗಳಿಲ್ಲ: