ಶುಕ್ರವಾರ, ಆಗಸ್ಟ್ 30, 2013

ಸೌರಮಾನ ಯುಗಾದಿ

ಸೌರಮಾನ ಯುಗಾದಿ 

ಮೇಷ ಮಾಸದ ಪ್ರಾರಂಭದ ದಿನವೇ ಸೌರಮಾನ ಯುಗಾದಿ. ವೈಷಾಖಿ ಅಥವಾ ಬೈಸಾಕಿ ಸಿಖ್‌ರಿಗೆ ಶುಭವಾದ ದಿನ. ಹಿಮಾಚಲ ಪ್ರದೇಶದಲಿ ಹೊಸ ವರುಷ ಜ್ವಾಲಾಮುಖಿ ದೇವಿಗೆ ಪೂಜೆ ಸಲ್ಲಿಸುವ ದಿನ. ರೊಂಗಾಳಿ ಬಿಹು ಅಸ್ಸಾಂನಲ್ಲಿ.   ಒಳಿತನ್ನು ಬೇಡಿ, ಕೃಷಿ ಕಾಯಕಕ್ಕೆ ಸಿದ್ಧತೆ ನಡೆಸಿ ಸಂಗೀತ ನೃತ್ಯ ಸಾಂಸ್ಕೃತಿಕ ಉತ್ಸವಗಳ ಮೂಲಕ  ಹೊಸ ಹೊಸ ಬಾಂಧವ್ಯಗಳನು ಬೆಳೆಸಲಿ ಎಂಬ ಏಳು ದಿನಗಳ ನಲಿವಿನ ಹಬ್ಬವಿದು. 'ನಬ ಬರ್ಶ್' ಬಂಗಾಳಿಗಳಿಗೆ, 'ಪುತ್ತಾಂಡ್' ತಮಿಳುನಾಡು, 'ವಿಷು' ಕೇರಳ, ಉತ್ತರಾಂಚಲ್, ಹರಯಾಣಿಗರಿಗೂ ಇಂದು ಹೊಸ ವರುಷ ಹೊಸ ಹರುಷ.

ಸೌರಮಾನ ಪಂಚಾಂಗ ಸೂರ್ಯನ ಚಲನೆಯಾಧಾರಿತ. ಎಲ್ಲಾ ವಿರೋಧಗಳನ್ನೂ ಮೆಟ್ಟಿ ನಿಂತು  ಹೊಸ ವರುಷಕೆ ನವ ಚೈತನ್ಯ ತುಂಬುವ, ಹೊಸ ಸಂವತ್ಸರವನ್ನು ಸ್ವಾಗತಿಸುವ "ಬಿಸು ಪರ್ಬ" ಇಂದು. ಕರ್ನಾಟಕದ ಬಯಲು ಸೀಮೆ, ಮೈಸೂರು, ಬೆಂಗಳೂರು, ಆಂಧ್ರ, ಮಹಾರಾಷ್ಟ್ರದವರು ಚಾಂದ್ರಮಾನ ಪರಿಪಾಲಕರಾದರೆ ಕರ್ನಾಟಕದ ದಕ್ಷಿಣ ಕರಾವಳಿ, ತಮಿಳುನಾಡು, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲಪ್ರದೇಶ, ಅಸ್ಸಾಂ, ಶ್ರೀಲಂಕಾ ಹಾಗೂ ನೇಪಾಳಿಗರು ಸೌರಮಾನ ಪರಿಪಾಲಕರು.

ಹಾಂ.  ಇನ್ನೊಂದು ವಿಚಾರ ಹಿಂದಿನ ತಲೆಮಾರುಗಳಿಂದ  ಕರ್ನಾಟಕದಲ್ಲಿ ನೆಲೆಸಿರುವ ತಮಿಳು ಸಂಪ್ರದಾಯದ ಅಯ್ಯರ್, ಅಯ್ಯಂಗಾರ್ ಮುಂತಾದ ಸಂಸ್ಕಾರಕ್ಕೆ ಸೇರಿದ ಇಲ್ಲಿಯ ಬಹಳಷ್ಟು ಜನ ಸಹಾ  ಸೌರಮಾನ ಯುಗಾದಿ ಎಂದು ಮತ್ತೊಮ್ಮೆ ಒಬ್ಬಟ್ಟು ಮಾಡಿಕೊಂಡು  ಯುಗಾದಿ ಸಿಹಿ ಸವಿಯುವ ದಿನ.

ಹೀಗಾಗಿ ನಮ್ಮ ಭಾರತೀಯ ಆಚರಣೆಗಳ ಶುಭದಿನವಾಗಿ  ಮತ್ತು ಹಬ್ಬ ಆಚರಿಸುವ ಅನೇಕ ಸಹೋದರ ಸಹೋದರಿಯರ ಸಂತಸದ ಈ ಸಂದರ್ಭವಾಗಿ ಸಕಲರಿಗೂ ಶುಭ ಹಾರೈಕೆಗಳು.


ಚಿತ್ರಕೃಪೆ: aroonkalandy.blogspot.com

Tag: Souramana Ugadi

ಕಾಮೆಂಟ್‌ಗಳಿಲ್ಲ: