ಶುಕ್ರವಾರ, ಆಗಸ್ಟ್ 30, 2013

ಜಲಿಯನ್ ವಾಲಾ ಬಾಗ್ ಸ್ಮರಣೆ

ಜಲಿಯನ್ ವಾಲಾ ಬಾಗ್ ಸ್ಮರಣೆ

ಏಪ್ರಿಲ್ 13, ಅಮೃತಸರದ ಜಲಿಯನ್ ವಾಲಾ ಬಾಗಿನಲ್ಲಿ ನಮಗಾಗಿ ಅಸಂಖ್ಯಾತ ಸ್ತ್ರೀ ಪುರುಷ ಮಕ್ಕಳು ಜೀವತೆತ್ತ ದಿನ.  ಅವರಿಗಾಗಿ ಮನಮಿಡಿಯುವ ಕ್ಷಣವಿದು.

ಏಪ್ರಿಲ್ 13, 1919ರಲ್ಲಿ ಈ ಚಿತ್ರದಲ್ಲಿ ತೋರಿರುವ ಕಿರು ಏಕ  ಪ್ರವೇಶದಲ್ಲಿ ಒಳಗೆ ಬಂದು ಸಭೆ ಸೇರಿದ್ದವರು  10,000ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು ಮತ್ತು ಮಕ್ಕಳು.   ಅವರಿಗೆ ಹೊರಹೋಗಲಿಕ್ಕೆ ಸಹಾ  ಯಾವುದೇ ಆಸ್ಪದವಿಲ್ಲದ ಹಾಗೆ, ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್ ಎಂಬ ಅಯೋಗ್ಯ ಅಧಿಕಾರಿಯ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು 15 ನಿಮಿಷಗಳ ಕಾಲ ಗುಂಡಿನ ಮಳೆಗರೆದವು.  ಈ ಗುಂಡಿನ ಸುರಿಮಳೆಯಲ್ಲಿ ಕನಿಷ್ಠ 379 ಜನ ಮೃತರಾಗಿ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡರು.  ಅನೇಕರು ಈ ಭಾವಿಗೆ ಹಾರಿದ ಘಟನೆ ಕೂಡಾ ನಡೆಯಿತು.  ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಇನ್ನಷ್ಟು ಹೆಚ್ಚಿಸಿತು.

ಇಂದು ನಮಗಾಗಿ ಜೀವತೇಯ್ದ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವುದರ ಜೊತೆಗೆ, ನಮಗಾಗಿ ತಮ್ಮ ಜೀವವನ್ನೂ ಬಲಿಕೊಟ್ಟು ಅಂದಿನ ಸಮಾಜ ನಮಗೆ ಕೊಡುಗೆಯಾಗಿ  ಕೊಟ್ಟ ಈ ಸ್ವಾತಂತ್ರ್ಯಕ್ಕೆ ನಿಷ್ಠಾವಂತವಾಗಿರಬೇಕಾಗಿದೆ,   ಇದರ ಜೊತೆಗೆ ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ಹೇಯಕೃತ್ಯಗಳ ವಿರುದ್ಧವಾಗಿ ನಮ್ಮ ದೇಶವನ್ನು ರಕ್ಷಿಸುವ ಜವಾಬ್ಧಾರಿ ಸಹಾ ನಮ್ಮ ಮೇಲಿದೆ.

Tag: Jalian Wala Bagh

ಕಾಮೆಂಟ್‌ಗಳಿಲ್ಲ: