ಗುರುವಾರ, ಆಗಸ್ಟ್ 29, 2013

ಮಹೇಶ್ ಭೂಪತಿ

ಮಹೇಶ್ ಭೂಪತಿ

ಮಹೇಶ್ ಭೂಪತಿ ಹುಟ್ಟಿದ್ದು ಜೂನ್ 7, 1974ರಲ್ಲಿ.  ವಿಶ್ವ ಟೆನ್ನಿಸ್ ಡಬ್ಬಲ್ಸ್ ಸ್ಪರ್ಧೆಗಳಲ್ಲಿ ಹನ್ನೆರಡು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಪಡೆದುಕೊಂಡು ಸಿರಿಸಹಿತವಾಗಿ ಕೀರ್ತಿವಂತರಾಗಿರುವ  ಈತ ಟೆನ್ನಿಸ್ ಡಬ್ಬಲ್ಸ್ ಆಟದಲ್ಲಿನ ವಿಶ್ವದ ಶ್ರೇಷ್ಠ ಆಟಗಾರರಲ್ಲೊಬ್ಬರೆಂದು ಹೆಸರುವಾಸಿಯಾಗಿದ್ದಾರೆ.  ಮಿಶ್ರ ಡಬ್ಬಲ್ಸ್ ಟೆನ್ನಿಸ್ಸಿನಲ್ಲಿ ಭಾರತಕ್ಕೆ ಪ್ರಥಮ ಗ್ರ್ಯಾಂಡ್ ಸ್ಲಾಮ್ ತಂದ ಕೀರ್ತಿ ಸಹಾ ಮಹೇಶ್ ಭೂಪತಿ ಅವರಿಗೆ ಸೇರಿದೆ.

ಭಾರತದ ಮತ್ತೊಬ್ಬ ಪ್ರತಿಭಾವಂತ ಲಿಯಾಂಡರ್ ಪೇಸ್ ಅವರೊಂದಿಗೆ ಹಲವು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಮತ್ತು  ಡೇವಿಸ್ ಕಪ್ ಪ್ರಶಸ್ತಿಗಳಲ್ಲಿ ಬಹಳಷ್ಟು ಜಯಸಾಧಿಸಿದರೂ ಇವರಿಬ್ಬರೂ ಒಬ್ಬರಿಗೊಬ್ಬರ ಪ್ರತಿಷ್ಠೆಯಲ್ಲಿ ಬೇರೆ ಬೇರೆಯಾಗಿ ವಿಶ್ವದ ವಿವಿಧ ಜೊತೆಗಾರ ಹುಡುಗ ಹುಡುಗಿಯರೊಡನೆ ಪುರುಷರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಪ್ರಶಸ್ತಿಗಳಲ್ಲಿ ಅಪಾರ ಸಾಧನೆ ಮಾಡಿದ್ದಾರೆ.

ಭಾರತದಂತಹ ಕ್ರಿಕೆಟ್ಟಿಗೆ ಮಹತ್ವ ಹೊಂದಿರುವ ದೇಶದಲ್ಲಿ, ಅದರಲ್ಲೂ ದೈಹಿಕ ಕ್ಷಮತೆ ಮತ್ತು ಹೆಚ್ಚಿನ ಪರಿಣತಿ ಬಯಸುವ ಪ್ರತಿಷ್ಠಿತ ಸ್ಪರ್ಧಾತ್ಮಕವಾದ ಟೆನ್ನಿಸ್ ಅಂತಹ ಕ್ರೀಡೆಯಲ್ಲಿ ಈತ ಮಾಡಿರುವ ಸಾಧ್ಯತೆಗೆ ಭೇಷ್ ಎನ್ನಲೇಬೇಕು.

ವಿಶ್ವಸುಂದರಿಯಾಗಿ ಹೆಸರಾಗಿ ಸಿನಿಮಾದಲ್ಲೂ ಹೆಸರು ಮಾಡಿದ ಲಾರ ದತ್ತ ಅವರನ್ನು  ವಿವಾಹವಾಗಿಯಾಗಿರುವ  ಮಹೇಶ್ ಭೂಪತಿ ಸದ್ಯದಲ್ಲೇ ಹಲವಾರು ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ಆಟಗಾರರೊಡಗೂಡಿ ಇಂಟರ್ ನ್ಯಾಷನಲ್ ಪ್ರೀಮಿಯರ್ ಟೆನ್ನಿಸ್ ಲೀಗ್ ಸ್ಥಾಪಿಸಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಟೆನ್ನಿಸ್ ಸ್ಪರ್ಧೆಗಳನ್ನು ಆಯೋಜಿಸುವ ಸಿದ್ಧತೆಯಲ್ಲಿದ್ದಾರೆ.

ತಮಿಳುನಾಡಿನಲ್ಲಿ ಹುಟ್ಟಿ, ತೆಲುಗಿನವರಾದ ಮಹೇಶ್  ಬೆಂಗಳೂರು  ನಿವಾಸಿ. ಮಹೇಶ್ ಭೂಪತಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.

Tag: Mahesh Bhupathi

ಕಾಮೆಂಟ್‌ಗಳಿಲ್ಲ: