ಅರ್ಶದ್ ವಾರ್ಸಿ
ಅರ್ಶದ್ ವಾರ್ಸಿ ಹುಟ್ಟಿದ ದಿನ ಏಪ್ರಿಲ್ 19, 1968. ಈತ ಮುನ್ನಾಭಾಯಿ ಎಂ.ಬಿ.ಬಿ.ಎಸ್ ಮತ್ತು ಲಗೇ ರಹೋ ಮುನ್ನಾಭಾಯಿ ಚಿತ್ರಗಳಲ್ಲಿ ನೀಡಿರುವ ಮನಮೆಚ್ಚುವ ಅಭಿನಯಕ್ಕಾಗಿ ಬಹಳ ಹಿಡಿಸಿಬಿಟ್ಟಿದ್ದಾನೆ. ರಾಜ್ ಕುಮಾರ್ ಹಿರಾನಿಯಂತಹ ಉತ್ತಮ ಅಭಿರುಚಿಯ ನಿರ್ದೇಶಕನಿಗೆ ಸಂಜಯ್ ದತ್ ಅಂತಹ ಒಬ್ಬ ವ್ಯಕ್ತಿಯನ್ನು ಸಹಾ ಉತ್ತಮ ನಟನನ್ನಾಗಿ ಮಾಡುವ ಶಕ್ತಿಯಿದೆ. ಮರೆತು ಹೋಗಿರುವ ಗಾಂಧಿಯನ್ನೂ ಹೊಸ ರೀತಿಯಲ್ಲಿ ಹೀರೋ ಆಗಿಸುವ ಶಕ್ತಿಯಿದೆ. ಈ ಕೈಚಳಕದಲ್ಲಿ ಮೂಡಿಬಂದ ಅರ್ಶದ್ ವಾರ್ಸಿ ಮುಂದೆ ಕೂಡಾ ಉತ್ತಮ ಪಾತ್ರಗಳಲ್ಲಿ ಅಭಿನಯಿಸಿ ಕೀರ್ತಿವಂತನಾಗಲಿ. ಮೇಲೆ ಹೇಳಿದ ಮುನ್ನಾಭಾಯ್ ಚಿತ್ರಗಳ ಈ ‘ಸರ್ಕಿಟ್’ಗೆ ನಾನು ಅಭಿಮಾನಿ. ಆತನಿಗೆ ಒಳಿತಾಗಲಿ.
Tag: Arshad Warsi
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ