ಶನಿವಾರ, ಸೆಪ್ಟೆಂಬರ್ 7, 2013

ಓಡುವ ನದಿ ಸಾಗರವ ಬೆರೆಯಲೆ ಬೇಕು

ಓಡುವ ನದಿ ಸಾಗರವ ಬೆರೆಯಲೆ ಬೇಕು
ನಾನೂ ನೀನು ಎಂದಾದರು ಸೇರಲೆ ಬೇಕು
ಸೇರಿ ಬಾಳಲೆ ಬೇಕು ಬಾಳು ಬೆಳಗಲೆ ಬೇಕು
ಹೃದಯ ಹಗುರಾಯಿತು ಬದುಕು ಜೇನಾಯಿತು
ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು

ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು
ಮನೆಯ ಸುತ್ತ ಹೂವರಾಶಿ ಹಾಸಿರಬೇಕು
ತಂಗಾಳಿ ಜೋಗುಳವ ಹಾಡಲಿಬೇಕು
ಬಂಗಾರದ ಹೂವೆ ನೀನು ನಗುತಿರಬೇಕು
 ನನ್ನ ಜೊತೆಗಿರಬೇಕು
ಓಡುವ ನದಿ ಸಾಗರವ ಬೆರೆಯಲೆ ಬೇಕು
ನಾನು ನೀನು ಎಂದಾದರು ಸೇರಲೆಬೇಕು
ಸೇರಿ ಬಾಳಲೆಬೇಕು ಬಾಳು ಬೆಳಗಲೆಬೇಕು

ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ
ಹರುಷದಲ್ಲಿ ದುಃಖದಲ್ಲಿ ಭಾಗಿಯಾಗುವೆ
ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ
ಬಳ್ಳಿ ಮರವ ಹಬ್ಬಿದಂತೆ ನಿನ್ನೊಡನಿರುವೆ
ಬಯಕೆ ಪೂರೈಸುವೆ
ಓಡುವ ನದಿ ಸಾಗರವ ಬೆರೆಯಲೆಬೇಕು
ನಾನೂ ನೀನು ಎಂದಾದರು ಸೇರಲೆಬೇಕು
ಸೇರಿ ಬಾಳಲೆಬೇಕು ಬಾಳು ಬೆಳಗಲೆಬೇಕು
ಹೃದಯ ಹಗುರಾಯಿತು ಬದುಕು ಜೇನಾಯಿತು
ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು

ಚಿತ್ರ: ಬಂಗಾರದ ಹೂವು
ರಚನೆ: ಚಿ. ಉದಯಶಂಕರ
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲTag: Oduva nadi sagarava bereyale beku, oduva nadi saagarava bereyale beku

ಕಾಮೆಂಟ್‌ಗಳಿಲ್ಲ: