ಮಂಗಳವಾರ, ಸೆಪ್ಟೆಂಬರ್ 3, 2013

'ಇಳಾ ಭಟ್ ನನ್ನ ಆದರ್ಶ' ಎಂದ ಹಿಲರಿ ಕ್ಲಿಂಟನ್

'ಇಳಾ ಭಟ್  ನನ್ನ ಆದರ್ಶ' ಎಂದ ಹಿಲರಿ ಕ್ಲಿಂಟನ್

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಭಾರತದ ಮಹಿಳಾ ಸ್ವ ಉದ್ಯೋಗ ಸಂಘಟನೆಯ ಸಂಸ್ಥಾಪಕಿ ಇಳಾ ಭಟ್ ಅವರು ನನ್ನ ಆದರ್ಶ ಎನ್ನುತ್ತಾರೆ. `ಸಾಕ್ಷಿ ಮತ್ತು ಪರಿಣಾಮ ಕುರಿತ ಲಿಂಗಾನುಪಾತ`ದ ಅಂತರ ಕುರಿತು ಗುರುವಾರ ನಡೆದ ಸಮಾರೋಪ ಸಮಾರಂಭದಲ್ಲಿ  ಹಿಲರಿ ಈ ವಿಷಯವನ್ನು ಪ್ರಸ್ತಾಪಸಿದ್ದಾರೆ.

`ಮಹಿಳೆಯರು ಕಾನೂನು ಪದವಿ ಅಧ್ಯಯನ ಮಾಡದ ಕಾಲದಲ್ಲಿ ಅತೀ ವಿರಳವಾಗಿ 1950ರಲ್ಲಿ ಅವರು ಕಾನೂನು ಪದವಿ ಪಡೆದಿದ್ದರು` ಎಂದು ಇಳಾ ಅವರ ಕಾರ್ಯವನ್ನು ಹಿಲರಿ ಶ್ಲಾಘಿಸಿದ್ದಾರೆ.` `ಕಾನೂನು ಪದವಿಯನ್ನು ಪಡೆದರೂ ಅದೇ ಕ್ಷೇತ್ರದಲ್ಲಿ ಮುಂದುವರಿಯದ ಇಳಾ, ಸ್ಥಳೀಯ ಕಾರ್ಮಿಕ ಸಂಘಟನೆಗಾಗಿ ತೊಡಗಿಸಿಕೊಂಡರು. ಆದರೆ ಕೈಗಾರಿಕಾ ಕಾರ್ಮಿಕರಿಗೆ ಮಾತ್ರ ಕಾನೂನು ಮಾನ್ಯತೆ ನೀಡುತ್ತದೆ. ಆದರೆ ಹೆಚ್ಚಿನ ಮಹಿಳೆಯರು ಅನೌಪಚಾರಿಕ ಕೆಲಸ ಮಾಡುತ್ತಿದ್ದರೂ ಭಾರತದಲ್ಲಿ ಕೇವಲ ಶೇ 6ರಷ್ಟು ಮಹಿಳೆಯರನ್ನು ಮಾತ್ರ ಉದ್ಯೋಗಿಗಳು ಎಂದು ಅಧಿಕೃತವಾಗಿ ಪರಿಗಣಿಸಲಾಗಿದೆ ಎಂಬುದನ್ನು ಇಳಾ ಅರಿತಿದ್ದರು` ಎಂದು ಹಿಲರಿ ಹೇಳಿದ್ದಾರೆ.

`ಕಠಿಣವಾದ ಕೆಲಸ ಮಾಡುವ ಮಹಿಳೆಯರಿಗೆ ಇಳಾ ಸಹಾಯ ಮಾಡಿದ್ದರು. ಆದರೆ ಇದು ಸರ್ಕಾರದ ಗಮನಕ್ಕೆ ಬರಲಿಲ್ಲ` ಎಂದು ಅವರು ವಿಷಾದಿಸಿದ್ದಾರೆ. `ದುಡಿಯುವ ಮಹಿಳೆಯರು ದತ್ತಾಂಶಗಳು ಲಭಿಸಿದರೆ ಯೋಜನೆ ರೂಪಿಸುವವರು ಅದನ್ನು ಅಲ್ಲಗಳೆಯಲಾಗದು. 1996ರಲ್ಲಿ ಇಳಾ ನೇತೃತ್ವದಲ್ಲಿ ಜರುಗಿದ ಮನೆ ಕೆಲಸ ಮಾಡುವರ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಮನೆ ಕೆಲಸ ಮಾಡುವ ಮಹಿಳೆಯರ ಹಕ್ಕು ಮತ್ತು ಕೊಡುಗೆ, ಅವರ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲಲಾಯಿತು ಎಂದು ಅವರು ಸ್ಮರಿಸಿದ್ದಾರೆ.

ಯಾರು ಈ ಇಳಾ ಭಟ್?

ಭಾರತೀಯ ಸಾಮಾಜಿಕ-ಕಾರ್ಯಕರ್ತೆ ಮತ್ತು SEWAದ ಸ್ಥಾಪಕಿಯಾದ ಇಳಾ ಭಟ್ ಸೆಪ್ಟೆಂಬರ್ 3, 1933ರಲ್ಲಿ ಜನಿಸಿದರು.    ಭಾರತದ ಬಡ-ಮಹಿಳೆಯರ ಜೀವನಮಟ್ಟವನ್ನು ಹೆಚ್ಚಿಸುವ ದಿಶೆಯಲ್ಲಿ ಅಪಾರವಾಗಿ ಶ್ರಮಿಸಿರುವ ಇಳಾ ಅವರ ಕಾರ್ಯ ವಿಶ್ವದಾದ್ಯಂತ ಜನಮೆಚ್ಚುಗೆ ಗಳಿಸಿದೆ. ಇಳಾ ಭಟ್ ಅಹಮದಾಬಾದಿನಲ್ಲಿ ನೆಲೆಸಿದ್ದಾರೆ.

’ಇಳಾ ಭಟ್’ ರವರು, 1972ರಲ್ಲಿ,'Self Employed Womens' Association,'SEWA' ಸಂಸ್ಥೆಯನ್ನು ಸ್ಥಾಪಿಸಿದರು. ಇದೊಂದು ಕಾರ್ಮಿಕ ಸಂಘಟನೆಯಾಗಿದ್ದು 1.2 ದಶಲಕ್ಷಕ್ಕೂ  ಹೆಚ್ಚು ಸದಸ್ಯರನ್ನು ಹೊಂದಿದೆ. 1974ರಲ್ಲಿ ’ಇಳಾ’ರವರು ’ಸಹಕಾರಿ ಬ್ಯಾಂಕ್’ ಒಂದನ್ನೂ  ಸ್ಥಾಪಿಸಿದರು. ಈ ಬ್ಯಾಂಕಿನ ಕಾರ್ಯವ್ಯಾಪ್ತಿ, ಸುಮಾರು 3 ದಶಲಕ್ಷ ಹೆಣ್ಣುಮಕ್ಕಳ ಜೀವನವನ್ನು ರೂಪಿಸಿ ಸಹಾಯಮಾಡುವಲ್ಲಿ ಯಶಸ್ವಿಯಾಗಿದೆ.

’ಇಳಾ ಭಟ್’ ತಮ್ಮ ಸೇವಾ ಆದರ್ಶವನ್ನು  ಮಹಿಳೆ, ಕೆಲಸ ಮತ್ತು ಶಾಂತಿ, ಎನ್ನುವ ಮೂರು ಪದಗಳಲ್ಲಿ ಬಣ್ಣಿಸುತ್ತಾರೆ.  2010ರ ವರ್ಷದಲ್ಲಿ ಇಳಾ ಭಟ್ ಅವರಿಗೆ  ಪ್ರತಿಷ್ಠಿತ ನಿವಾನೋ ಶಾಂತಿ ಪುರಸ್ಕಾರ'ಲಭಿಸಿದೆ. ಇಳಾ ಭಟ್ ಅವರ ಕೆಲಸದಲ್ಲಿ ಧಾರ್ಮಿಕ ಶ್ರದ್ಧೆ, ಉತ್ಸಾಹಗಳಿವೆ, ಸೇವಾಮನೋಭಾವಗಳಿವೆ. ಗಾಂಧೀಜಿಯವರ ಆದರ್ಶದ ಸಾಮಾಜಿಕ ಪರಿವರ್ತನೆ, ಮತ್ತು ಮಹಿಳೆಯರಿಗೆ ಸಿಕ್ಕಬೇಕಾದ ಆರ್ಥಿಕ ಸ್ವಾತಂತ್ರ್ಯಕ್ಕೆ ಒತ್ತುನೀಡಲಾಗುತ್ತಿದೆ ಎಂದು ನಿವಾನೋ ಪ್ರತಿಷ್ಠಾನ ಇಳಾ ಭಟ್ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ಇಳಾ ಭಟ್ ಅವರಿಗೆ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಮತ್ತು ರಾಡ್ಕ್ಲಿಫ್ ಪ್ರತಿಷ್ಠಾನ ಗೌರವ ಮುಂತಾದ ಅನೇಕ ಪ್ರಶಸ್ತಿಗಳೂ ಸಂದಿವೆ.

ಈ ಮಹಾನ್ ಸಾಹಸಪೂರ್ಣ ಚೇತನಕ್ಕೆ ನಮ್ಮ ಗೌರವಗಳು.

Tag: Ila Bhat

ಕಾಮೆಂಟ್‌ಗಳಿಲ್ಲ: