ಶುಕ್ರವಾರ, ಸೆಪ್ಟೆಂಬರ್ 6, 2013

ಹಿಂದೂಸ್ಥಾನವು ಎಂದೂ ಮರೆಯದ

ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು ಕನ್ನಡ ನುಡಿಯ ಸಿರಿಯಾಗು

ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು
ಭಾರತೀಯರ ವಿಶ್ವಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು

ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು
ಭಾರತ ಶಕ್ತಿಯ ದೂರಗೈಯುವ ಧೀರಶಿರೋಮಣಿ ನೀನಾಗು
ಬ್ರಹ್ಮಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು

ಚಿತ್ರ: ಅಮೃತ ಘಳಿಗೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ್
ಗಾಯನ: ಬಿ. ಆರ್. ಛಾಯಾ
Tag: Hindustanavu endoo mareyada1 ಕಾಮೆಂಟ್‌:

Babumulla ಹೇಳಿದರು...

ನಾನು ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಶಕ್ತಿನಗರದ ನಿವಾಸಿ ಯಾಗಿದ್ದು ನನಗೆ ಕನ್ನಡ ಎಂದರೆ ತುಂಬಾ ಇಷ್ಟ ನಾನು ಕನ್ನಡವನ್ನೇ ಮಾತನಾಡಿ ಕನ್ನಡವನ್ನು ಬಳಸಿ ಕನ್ನಡವನ್ನು ಮೊಬೈಲ್ ನಲ್ಲಿ ಬಳಕೆ ಮಾಡುವ ಸಲುವಾಗಿ ಅನುಮತಿ ಕೊಡಬೇಕಾಗಿ ವಿನಂತಿ ಮತ್ತು ನನಗೆ ಕನ್ನಡವನ್ನು ಬಿಟ್ಟು ಬೇರೆ ಯಾವ ಭಾಷೆ ಬರೆಯುವುದಕ್ಕೆ ಮಾತನಾಡುವುದಕ್ಕೆ ಬರುವುದಿಲ್ಲ ಆದ ಕಾರಣ ಕನ್ನಡವನ್ನು ಮೊಬೈಲ್ ನಲ್ಲಿ ಬಳಸುವುದಕ್ಕೆ ಅನುಮತಿ ಮಾಡಿಕೊಡಬೇಕಾಗಿ ವಿನಂತಿ