ಶನಿವಾರ, ಸೆಪ್ಟೆಂಬರ್ 7, 2013

ಬಂದೆಯ ಬಾಳಿನ ಬೆಳಕಾಗಿ

ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ

ತಾವರೆ ಮೊಗ್ಗೊಂದು ಸೂರ್ಯನ ಕಂಡಾಗ
ಅರಳೀ ನಗುವ ಹಾಗೆ
ಈ ಮೊಗವೇಕೋ ಕಾಣೆ
ಹೂವಾಯಿತೀಗ
ಕತ್ತಲು ಎಲ್ಲೆಲ್ಲೂ ಮುತ್ತಲು ಭಯದಲ್ಲಿ
ಹೂವೂ ಬಾಡುತಿರಲು
ಈ ನಿನ್ನ ಕಣ್ಣ ಕಾಂತಿ
ಹೊಸ ಜೀವ ತಂದಿತು
ಜಾಣೆ ನುಡಿಗಳೋ ವೀಣೆಸ್ವರಗಳೋ
ಕಾಣೆನು ಪ್ರೇಯಸಿ ನಾನು
ಕಾಣೆನು ಪ್ರೇಯಸಿ ನಾನು

ಆಸರೆ ಏನೊಂದು ಕಾಣದೆ ನಾ ನೊಂದು
ಅಂದು ಓಡಿ ಬಂದೆ
ದೇವರ ಹಾಗೆ ನಿನ್ನ ನಾನಲ್ಲಿ ಕಂಡೆ
ಹೇಳುವರಾರಿಲ್ಲ ಕೇಳುವರಾರಿಲ್ಲ
ಒಂಟೀ ಬಾಳಿನಲ್ಲಿ
ದೇವತೆಯಂತೆ ನೀನು ನನ್ನಲ್ಲಿ ಬಂದೆ
ಹೃದಯ ಅರಳಿತು ಮನಸು ಕುಣಿಯಿತು
ಈ ಸವಿ ಮಾತನು ಕೇಳಿ
ಈ ಸವಿ ಮಾತನು ಕೇಳಿ

ಚಿತ್ರ: ಅವಳ ಹೆಜ್ಜೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಎಸ್ ಪಿ ಬಾಲಸುಬ್ರಮಣ್ಯಮ್ ಮತ್ತು ಎಸ್ ಜಾನಕಿ


Tag: bandeya baalina belakaagi, bandeya balina belakagi

ಕಾಮೆಂಟ್‌ಗಳಿಲ್ಲ: