ಬುಧವಾರ, ಸೆಪ್ಟೆಂಬರ್ 4, 2013

ಕೃಷ್ಣಾ ನೀ ಬೇಗನೆ ಬಾರೋ


ಕೃಷ್ಣಾ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೆ ತೋರೋ

ಕಾಲಲಂದುಗೆ ಗೆಜ್ಜೆ ನೀಲದ ಭಾಪುರಿ
ನೀಲವರ್ಣನೆ ನಾಟ್ಯವಾಡುತ ಬಾರೋ

ಉಡಿಯಲ್ಲಿ ಕಿರುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳೊಳು ಧರಿಸಿದ ವೈಜಯಂತಿ ಮಾಲೆ

ಕಾಶಿಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ

ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ

ಸಾಹಿತ್ಯ: ಶ್ರೀವ್ಯಾಸರಾಯರುTag: Krishna nee begane baro

ಕಾಮೆಂಟ್‌ಗಳಿಲ್ಲ: