ಶನಿವಾರ, ಸೆಪ್ಟೆಂಬರ್ 7, 2013

ಶ್ರೀಕೃಷ್ಣ ಜನಿಸಿದ ಧರೆಯಲ್ಲಿ

ಗಾಡಾಂಧಕಾರದ ಇರುಳಲ್ಲಿ
ಕಾರ್ಮೋಡ ನೀರಾದ ವೇಳೆಯಲಿ

ಶ್ರೀಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ
ಮಾವನ ಕಾವಲು ಬಾಗಿಲಲಿ

ತಾಯ ಸೆರೆಯ ಬಿಡಿಸಲೆಂದೇ
ಕೃಷ್ಣನಂತೆ ಬಂದೆಯೇನು?
ಗೀತೆಯನ್ನು ಬೋಧಿಸಲೆಂದೇ
ಭುವಿಗೆ ಇಳಿದು ಬಂದೆಯೇನು?
ನೀನು ಬಂದ ಗಳಿಗೆಯಿಂದ
ಶೋಕವೆಲ್ಲ ತೀರಲಿ
ಶಾಂತಿ ಸೌಖ್ಯ ತುಂಬಲಿ

ನೂರು ಒಗಟು ಬಿಡಿಸಿ ನಗುವ
ಜಾಣೆ ನಿನ್ನ ತಾಯಿ ಅಂದು
ಬಾಳಿನೊಗಟ ಒಡೆವ ದಾರಿ
ಕಾಣದಾಗಿ ಅಳುವಳಿಂದು
ನೂರು ನೋವ ನೀಗಿ ನಲಿವ
ದಾರಿ ಬೇಗ ತೋರಿಸು
ತಾಯ ಆಸೆ ತೀರಿಸು

ಚಿತ್ರ: ದೇವರಗುಡಿ
ಸಾಹಿತ್ಯ: ಚಿ. ಉದಯಶಂಕರ
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ವಾಣಿ ಜಯರಾಂ.


Tag: Srikrishna janisida dhareyalli, Sri krishna janisida dareyalli


ಕಾಮೆಂಟ್‌ಗಳಿಲ್ಲ: