ಬುಧವಾರ, ಸೆಪ್ಟೆಂಬರ್ 4, 2013

ಕಂಗಳಿದ್ಯಾತಕೋ


ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ

ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ

ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು
ಚಂದ್ರಪುಷ್ಕರಣಿ ಸ್ನಾನವ ಮಾಡಿ
ಆನಂದದಿಂದಲಿ ರಂಗನ ಕಾಣದ.

ಹರಿಪಾದೋದಕಸಮ ಕಾವೇರಿ
ವಿರಜಾ ನದಿಲಿ ಸ್ನಾನವ ಮಾಡಿ
ಪರಮ ವೈಕುಂಠ ರಂಗ ಮಂದಿರ
ಪರವಾಸುದೇವನ ನೋಡದ.

ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರ ಪದಕ
ತೇರನೇರಿ ಬೀದಿಲಿ ಬರುವ
ರಂಗವಿಠ್ಠಲರಾಯನ ನೋಡದ

ಸಾಹಿತ್ಯ: ಶ್ರೀಪಾದರಾಜರು


Photo Courtesy: http://www.flickr.com/photos/rebitz/309681403/sizes/z/in/photostream/

Tag: Kangalidyatako kaveri rangana nodada

ಕಾಮೆಂಟ್‌ಗಳಿಲ್ಲ: