ಶುಕ್ರವಾರ, ಸೆಪ್ಟೆಂಬರ್ 6, 2013

ಸ್ವಾಭಿಮಾನದ ನಲ್ಲೆ

ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ ಒಳಗೆ ವೇದನೆ ಇಳಿದು ಬಾ ಬಾಲೆ
ಸ್ವಾಭಿಮಾನದ ನಲ್ಲೆ

ಮೂಡಿ ಚoದಿರ ನಿನಗಾಗಿ ಕೂಡಿ ತoಬೆಲರೆನಗಾಗಿ
ನೋಡು ಪ್ರಿಯತಮೆ ಹಾಲು ಹುಣ್ಣಿಮೆ ತಂದ ನಮಗಾಗಿ
ಸ್ವಾಭಿಮಾನದ ನಲ್ಲೆ

ನಿನ್ನ ಗರ್ವದ ಹುಸಿ ಮೌನ ಅಣಿಕಿಸದೆ ನಾ ಬಿಡೆ ನಿನ್ನ
ಪುರುಷ ಸಿಂಹ ನಾ ಬಾಹು ಬಂಧನ ನಿನ್ನ ಕಲ್ಯಾಣ
ಸ್ವಾಭಿಮಾನದ ನಲ್ಲೆ

ತುoಬು ಹರೆಯದ ಹೊಸ ಹೆಣ್ಣೆ ಒಲೆಯ ಮೇಲಿನ ಹಸಿ ಬೆಣ್ಣೆ
ಏಕೆ ಸುಮ್ಮನೇ ಆತ್ಮ ವಂಚನೆ ನಿನ್ನ ಪತಿ ನಾನೇ
ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ ಒಳಗೆ ವೇದನೆ ಬಳಿಗೆ ಬಾ ಬಾಲೆ
ಸ್ವಾಭಿಮಾನದ ನಲ್ಲೆ

ಚಿತ್ರ: ವೀರಕೇಸರಿ
ಸಾಹಿತ್ಯ: ಕು. ರಾ. ಸೀತಾರಾಮಶಾಸ್ತ್ರಿ
ಸಂಗೀತ ಮತ್ತು ಗಾಯನ: ಘಂಟಸಾಲ

Tag: Swabhimanada nalle saaku samyama balle


ಕಾಮೆಂಟ್‌ಗಳಿಲ್ಲ: