ಗುರುವಾರ, ಸೆಪ್ಟೆಂಬರ್ 19, 2013

ರನ್ನರ್ ರನ್ನರ್ ಹೋ ನಾನು ರನ್ನರ್

ರನ್ನರ್ ರನ್ನರ್ ಹೋ ನಾನು ರನ್ನರ್
ರನ್ನರ್ ರನ್ನರ್ ಹೋ ನಾನು ರನ್ನರ್
ನನ್ನ ಯಜಮಾನರು ಕಂಪೆನಿ ಸರಕಾರ
ನನ್ನ ಯಜಮಾನರು ಕಂಪೆನಿ ಸರಕಾರ
ರನ್ನರ್ ರನ್ನರ್ ಹೋ ನಾನು ರನ್ನರ್
ರನ್ನರ್ ರನ್ನರ್

ಖಾಕಿ ಬಟ್ಟೆಯ ಒಳಗೆ ದಿಲ್ದಾರ ಮನಸು
ಗೆಜ್ಜೆ ಕೋಲಿನ ತುದಿಗೆ ಹಿತ್ತಾಳೆ ಅಣಸು
ಖಾಕಿ ಬಟ್ಟೆಯ ಒಳಗೆ ದಿಲ್ದಾರ ಮನಸು
ಗೆಜ್ಜೆ ಕೋಲಿನ ತುದಿಗೆ ಹಿತ್ತಾಳೆ ಅಣಸು
ಆ ಶಬ್ದ ಕೇಳಿದರೆ ನಿಮಗೇನು ಕನಸು
ಆ ಶಬ್ದ ಕೇಳಿದರೆ ನಿಮಗೇನು ಕನಸು
ಓಡೋಡಿ ಬರುವಿರಿ ತೆರೆದಿಟ್ಟ ಮನಸು
ಓಡೋಡಿ ಬರುವಿರಿ ತೆರೆದಿಟ್ಟ ಮನಸು
ರನ್ನರ್ ರನ್ನರ್ ಹೋ ನಾನು ರನ್ನರ್

ಸುಖದ ಸುದ್ದಿಯ ತರುವೆ ಓದುವೆನು ನಿಮಗೆ
ನಿಮ್ಮ ಸುದ್ದಿಯ ಬರೆದು ಇನ್ನೊಂದು ತುದಿಗೆ
ಸುಖದ ಸುದ್ದಿಯ ತರುವೆ ಓದುವೆನು ನಿಮಗೆ
ನಿಮ್ಮ ಸುದ್ದಿಯ ಬರೆದು ಇನ್ನೊಂದು ತುದಿಗೆ
ತಲಪಿಸುವುದೆ ಎನ್ನ ಸುಖ ಅದು ನನ್ನ ಭಾಗ್ಯ
ತಲಪಿಸುವುದೆ ಎನ್ನ ಸುಖ ಅದು ನನ್ನ ಭಾಗ್ಯ
ನಿಮ್ಮ ಬಹುಮಾನಗಳೆ ಪರಮ ಸೌಭಾಗ್ಯ
ನಿಮ್ಮ ಬಹುಮಾನಗಳೆ ಪರಮ ಸೌಭಾಗ್ಯ
ರನ್ನರ್ ರನ್ನರ್ ಹೋ ನಾನು ರನ್ನರ್

ನೆಂಟ ನೆಂಟರ ಸುದ್ದಿ ಹಾಕುವೆನು ಗಂಟು
ಬೆಸೆಯುವೆನು ಹೊಸ ಪ್ರೇಮ ಬೇಕೆ ಹೊಸ ನೆಂಟು
ನೆಂಟ ನೆಂಟರ ಸುದ್ದಿ ಹಾಕುವೆನು ಗಂಟು
ಬೆಸೆಯುವೆನು ಹೊಸ ಪ್ರೇಮ ಬೇಕೆ ಹೊಸ ನೆಂಟು
ಆಗಾಗ ತರಲುಂಟು ಸತ್ತವರ ಸುದ್ದಿ
ಆಗಾಗ ತರಲುಂಟು ಸತ್ತವರ ಸುದ್ದಿ
ಏನು ಮಾಡಲಿ ಸ್ವಾಮಿ ಅದು ಶಿವನ ರೀತಿ
ಏನು ಮಾಡಲಿ ಸ್ವಾಮಿ ಅದು ಶಿವನ ರೀತಿ
ರನ್ನರ್ ರನ್ನರ್ ಹೋ ನಾನು ರನ್ನರ್

ನನಗೂ ಜಂಬಗಳುಂಟು ನಾ ಮೇಘದೂತ
ಹಕ್ಕಿ ಗಾಳಿಗು ಮಿಗಿಲು ಈ ನನ್ನ ಓಟ
ನನಗೂ ಜಂಬಗಳುಂಟು ನಾ ಮೇಘದೂತ
ಹಕ್ಕಿ ಗಾಳಿಗು ಮಿಗಿಲು ಈ ನನ್ನ ಓಟ
ಎಷ್ಟೆಂದರೂ ನಾನು ಮಾನವನು ಸ್ವಾಮಿ
ನಿಮ್ಮ ಪ್ರೀತಿಯ ಮುಂದೆ ಸಣ್ಣ ಆಸಾಮಿ
ಎಷ್ಟೆಂದರೂ ನಾನು ಮಾನವನು ಸ್ವಾಮಿ
ನಿಮ್ಮ ಪ್ರೀತಿಯ ಮುಂದೆ ಸಣ್ಣ ಆಸಾಮಿ
ರನ್ನರ್ ರನ್ನರ್ ಹೋ ನಾನು ರನ್ನರ್
ನನ್ನ ಯಜಮಾನರು ಕಂಪೆನಿ ಸರಕಾರ
ರನ್ನರ್ ರನ್ನರ್ ಹೋ ನಾನು ರನ್ನರ್
ನಾನು ರನ್ನರ್, ರನ್ನರ್ ರನ್ನರ್

ಚಿತ್ರ: ಫಣಿಯಮ್ಮ
ಸಾಹಿತ್ಯ: ಚಂದ್ರಶೇಖರ್ ಕಂಬಾರ
ಸಂಗೀತ: ಬಿ.ವಿ.ಕಾರಂತ್
ಹಾಡಿದವರು: ಎಸ್.ಜಾನಕಿTag: Runner Runner ho naanu Runner

ಕಾಮೆಂಟ್‌ಗಳಿಲ್ಲ: