ಭಾನುವಾರ, ಸೆಪ್ಟೆಂಬರ್ 1, 2013

ಪ್ರೇಮ

ಪ್ರೇಮ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಗಣನೀಯವಾಗಿ ಯಶಸ್ವಿಯಾದ ನಟಿ ಪ್ರೇಮ ಅವರ ಹುಟ್ಟಿದ ಹಬ್ಬ.  ಬೆಂಗಳೂರಿನಲ್ಲಿ ವ್ಯಾಸಂಗ ನಡೆಸಿದ ಕೊಡಗಿನ ಕುವರಿ ಪ್ರೇಮ ತಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ಪ್ರತಿಭೆಯಿಂದ ಕನ್ನಡದ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. 

'ಸವ್ಯಸಾಚಿ' ಎಂಬ ಚಿತ್ರದ ಮೂಲಕ 1996ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದ ಪ್ರೇಮ ಮುಂದೆ 'ಓಂ', 'ನಮ್ಮೂರ ಮಂದಾರ ಹೂವೆ', 'ಉಪೇಂದ್ರ', 'ಚಂದ್ರಮುಖಿ ಪ್ರಾಣ ಸಖಿ', 'ಯಜಮಾನ', 'ಕನಸುಗಾರ', 'ಆಪ್ತಮಿತ್ರ' ಮುಂತಾದ ಪ್ರಮುಖ ಚಿತ್ರಗಳಲ್ಲಿ ಕನ್ನಡಿಗರ ಮನ ಗೆದ್ದವರು. 

ದಕ್ಷಿಣ ಭಾರತದ ಇತರ ಚಿತ್ರರಂಗಗಳಾದ ಮಲಯಾಳಂ, ತೆಲುಗು ಚಿತ್ರರಂಗಳಲ್ಲಿ ಕೂಡ ಸಾಕಷ್ಟು ಯಶಸ್ಸು ಕಂಡ ಪ್ರೇಮ ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ ನಂತರ ಚಿತ್ರರಂಗದಲ್ಲಿ ಅಪರೂಪರಾಗಿದ್ದಾರೆ.


'ಓಂ' ಚಿತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ, 'ಕನಸುಗಾರ' ಚಿತ್ರದ ಅಭಿನಯಕ್ಕೆ ಫಿಲಂ ಫೇರ್ ಪ್ರಶಸ್ತಿ ಮುಂತಾದವುಗಳಿಗೆ ಭಾಗಿಯಾಗಿರುವ ಪ್ರೇಮ ಅವರು ಚಿತ್ರರಂಗದಲ್ಲಿ ಕನ್ನಡದವರೇ ಕಡಿಮೆ ಆಗಿದ್ದ ಕಾಲದಲ್ಲಿ ಒಂದಷ್ಟು ಕನ್ನಡತನ ತೋರಿದವರು.  ಅವರಿಗೆ ಬದುಕಿನಲ್ಲಿ  ಎಲ್ಲ ರೀತಿಯಲ್ಲಿ ಶುಭವಾಗಲಿ.

Tag: Prema

ಕಾಮೆಂಟ್‌ಗಳಿಲ್ಲ: