ಶನಿವಾರ, ಸೆಪ್ಟೆಂಬರ್ 7, 2013

ಎಂತ ಮರುಳಯ್ಯ ಇದು ಎಂತ ಮರುಳು


ಎಂತ ಮರುಳಯ್ಯ ಇದು ಎಂತ ಮರುಳು
ಬೆಳಗಿನ ಹಿಮದಂತೆ ಹರಿವ ನೆರಳು
ತಳ ತಳ ಮಿನುಗಿ ಸೋಕಲು ಕರಗಿ
ಹರಿವುದು ಈ ಬಾಳಿನೆಲ್ಲ ತಿರುಳು

ಹರಿಯುವ ನೀರಿಗೆ ಯಾವ ಹೊಳೆ
ಹಾರುವ ಹಕ್ಕಿಗೆ ಎಲ್ಲಿ ಮನೆ
ಬಾಳಿನ ಕಡಲಿನ ತೆರೆಗಳ ಸೀಳಿ
ತಲಪುವುದಾಚೆಯ ದಡದಾ ಕೊನೆ

ಸಂಜೆಯ ನೇಸರ ಬಣ್ಣದ ನೀಲಿ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ
ಕಡಲಿಗೆ ಸಾಲಾಗಿ ಮೂಡುತ ಮುಳುಗುತ
ಬೆನ್ನಟ್ಟಿ ಸಾಗುವ ತೆರೆಗಳ ಹಾಡೆ
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ

ಚಿತ್ರ: ಸ್ಪಂದನ
ಸಾಹಿತ್ಯ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ: ಸಿ. ಅಶ್ವಥ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಂ


Tag: enta marulayya idu enta marulu, entha marulayya idu entha marulu


ಕಾಮೆಂಟ್‌ಗಳಿಲ್ಲ: