ಬುಧವಾರ, ಸೆಪ್ಟೆಂಬರ್ 4, 2013

ಸೇವಕನ ಮಾಡು


ಸೇವಕನ ಮಾಡು ಸೇವಕನ ಮಾಡು
ನಿನ್ನಂತೆ ನನ್ನ ಸೇವಕನ ಮಾಡು 
ಮಾರುತಿ...

ರಾಮಚಂದ್ರನ ಸೇವಿಸಿ ಪೂಜಿಸಿ
ಧನ್ಯನಾಗುವಂತೆ ಹರಸಿ ನನ್ನ
ಸೇವಕನ ಮಾಡು ಸೇವಕನ ಮಾಡು
ನಿನ್ನಂತೆ ನನ್ನ ಸೇವಕನ ಮಾಡು
ಮಾರುತಿ...

ಸೇವಕನಾದರೆ ದೊರೆಯುವ ಪ್ರಭುವಿನ 
ಕರುಣೆಗೆ ಎಣೆಯೇ ಇಲ್ಲ
ಸೇವೆಯು ನೀಡುವ ಮಹದಾನಂದವ 
ಬಣ್ಣಿಸೆ ಮಾತುಗಳಿಲ್ಲ
ಸೇವೆಯು ಕೊಡುವ ಫಲದ ಕಲ್ಪನೆ
ಕಲ್ಪವೃಕ್ಷಕೂ ಇಲ್ಲ
ಸೇವಕನ ಮಾಡು ಸೇವಕನ ಮಾಡು
ನಿನ್ನಂತೆ ನನ್ನ ಸೇವಕನ ಮಾಡು
ಮಾರುತಿ...

ಸೇವಕನೆಂದೇ ನಂದಿಗೆ ದೊರಕಿತು 
ಕೈಲಾಸದಲಿ ಸ್ಥಾನ
ಸೇವಕನಾಗೇ ಗರುಡನು ಪಡೆದನು 
ವೈಕುಂಠದಲಿ ತಾಣ
ಸೇವಕನಾದರೆ ನನ್ನಲಿ ಆಗ
ಕರಗುವುದು ಅಜ್ಞಾನ
ಸೇವಕನ ಮಾಡು ಸೇವಕನ ಮಾಡು
ನಿನ್ನಂತೆ ನನ್ನ ಸೇವಕನ ಮಾಡು
ಮಾರುತಿ...

ಸೇವಕನಾಗೇ ಎಲ್ಲ ಶಕ್ತಿಯು 
ನಿನ್ನ ಕೈಸೇರಿತು ಹನುಮ
ಪೂಜೆಯು ಹೊಂದುವ ಭಾಗ್ಯ ನೀಡಿತು 
ನಿನಗಾ ರಾಮನಾಮ
ನನ್ನೀ ಜನುಮವು ಸಾರ್ಥಕ ತಂದೆ
ಪಡೆದರೆ ನಿನ್ನಾ ಪ್ರೇಮ.
ಸೇವಕನ ಮಾಡು ಸೇವಕನ ಮಾಡು
ನಿನ್ನಂತೆ ನನ್ನ ಸೇವಕನ ಮಾಡು
ಮಾರುತಿ...ಸೇವಕನ ಮಾಡು
ಮಾರುತಿ...

ಸಾಹಿತ್ಯ: ಚಿ.ಉದಯಶಂಕರ್

Tag: Sevakana Madu ninnante nanna

ಕಾಮೆಂಟ್‌ಗಳಿಲ್ಲ: