ಶನಿವಾರ, ಸೆಪ್ಟೆಂಬರ್ 7, 2013

ಬೆಳದಿಂಗಳೊಂದೂ.. ಹೆಣ್ಣಾಗಿ ಬಂದಂತೆ ಕಂಡೆ

ಬೆಳದಿಂಗಳೊಂದೂ, ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ, ನಿಂತು ಸೋತೆ, 
ಸೋತು ಕವಿಯಾಗಿ ಕವಿತೇ ಹಾಡಿದೆ 

ಹೊಸದಾಗಿ ಮೊಗ್ಗೊಂದು ಹೂವಾಗಿ,
ಆ ಹೂವೇ ಈ ಹೆಣ್ಣ ಮೊಗವಾಗಿ,
ಸುಳಿದಾಡೊ ಮಿಂಚಿಂದ ಕಣ್ಣಾಗಿ
ಗಿಳಿಮಾತು ಅವಳಾಡೋ ಮಾತಾಗಿ
ತಂಗಾಳಿಗೆ ಓಲಾಡುವಾ, ಹಾ,
ತಂಗಾಳಿಗೆ ಓಲಾಡುವಾ
ಲತೆಯೊಂದು ನಡುವಾಯಿತೇನೋ 
ನವಿಲೊಂದು ಕುಣಿದಂತೆ ನಡೆವಾಗ ಸಂತೋಷಗೊಂಡೆ

ಹಗಲಲ್ಲಿ ಕಣ್ಮುಂದೆ ನೀನಿರುವೇ
ಇರುಳಲ್ಲಿ ಕನಸಲ್ಲಿ ನೀ ಬರುವೇ,
ಜೊತೆಯಾಗಿ ಇರುವಾಸೆ ತಂದಿರುವೇ
ನನಗೆಂದು ಹೊಸ ಬಾಳು ನೀ ತರುವೇ
ಬಂಗಾರಿಯೆ ಸಿಂಗಾರಿಯೇ ಹಾ 
ಬಂಗಾರಿಯೆ ಸಿಂಗಾರಿಯೇ
ನನ್ನೊಮ್ಮೆ ನೀ ನೋಡು ಚೆಲುವೆ
ಒಲವಿಂದ ಬಂದೀಗ ನನ್ನನ್ನು ನೀ ಸೇರು ಹೂವೆ

ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಎಸ್ ಪಿ ಬಾಲಸುಬ್ರಮಣ್ಯಂ
Tag: Beladingalondu hennagi bandante kande

ಕಾಮೆಂಟ್‌ಗಳಿಲ್ಲ: