ಮಂಗಳವಾರ, ಸೆಪ್ಟೆಂಬರ್ 3, 2013

ಲಕ್ಷ್ಮೀ ಸೆಹಗಲ್

ಲಕ್ಷ್ಮೀ ಸೆಹಗಲ್

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೊತೆ ಸ್ವಾತ್ರಂತ್ರ್ಯಕ್ಕಾಗಿ ಹೋರಾಡಿದ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಇಂದು ಕಾನ್ಪುರದಲ್ಲಿ ವಿಧಿವಶರಾಗಿದ್ದಾರೆ.  ಲಕ್ಷ್ಮೀ ಅವರಿಗೆ 97 ವರ್ಷವಾಗಿತ್ತು.

1914ರ ವರ್ಷದಲ್ಲಿ ತಮಿಳುನಾಡಿನಲ್ಲಿ ಜನಿಸಿದ್ದ ಲಕ್ಷ್ಮೀ ಅವರು ವೈದ್ಯಕೀಯ ಪದವಿ ಪಡೆದವರಾಗಿದ್ದರು.  ಭಾರತ ರಾಷ್ಟ್ರೀಯ ಸೇನೆಯ ಮಹಿಳಾ ವಿಭಾಗದಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದ ಲಕ್ಷ್ಮೀ ಅವರು, ರಾಣಿ ಜಾನ್ಸಿ ರೆಜಿಮೆಂಟಿನ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ಪಡೆದಿದ್ದರು.

ಸ್ವಾತಂತ್ರ್ಯಾನಂತರದಲ್ಲಿ ಕಮ್ಯೂನಿಸ್ಟ್ ಮಾರ್ಕ್ಸಿಸ್ಟ್ ಪಕ್ಷದ ಮೂಲಕ ರಾಜ್ಯಸಭೆಯನ್ನು ಪ್ರವೇಶಿಸಿದ್ದ ಲಕ್ಷ್ಮಿ ಸೆಹಗಾಲ್, ಆ ಪಕ್ಷದ ಕೈಗೊಂಬೆಯಾಗಿ ಅಬ್ದುಲ್ ಕಲಾಂ ಅವರ ವಿರುದ್ಧ ರಾಷ್ಟ್ರಪತಿ ಚುನಾವಣೆಯಲ್ಲಿ ಸಾಂಕೇತಿಕ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.

1998ರ ವರ್ಷದಲ್ಲಿ ಲಕ್ಷ್ಮೀ ಸೆಹಗಾಲ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿತ್ತು.  ಲಕ್ಷ್ಮೀ ಸೆಹಗಲ್ ಅವರ ಆತ್ಮಕ್ಕೆ ಶಾಂತಿ ಕೋರೋಣ.

Tag: Lakshmi Sehgal

ಕಾಮೆಂಟ್‌ಗಳಿಲ್ಲ: