ಭಾನುವಾರ, ಸೆಪ್ಟೆಂಬರ್ 8, 2013

ಮನಸೇ ಓ ಮನಸೇ ಎಂಥಾ ಮನಸೇ

ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಒಳ ಮನಸೇ
ಮನಸಿನಿನ್ನಲಿ ಯಾವ ಮನಸಿದೆ
ಯಾವ ಮನಸಿಗೆ ನೀ ಮನಸು ಮಾಡಿದೆ
ಮನಸಿಲ್ಲದ ಮನಸಿನಿಂದ ಮನಸು ಮಾಡಿ ಮಧುರ ಮನಸಿಗೇ...
ಮನಸು ಕೊಟ್ಟು ಮನಸನ್ನೆ ಮರೆತು ಬಿಟ್ಟೆಯಾ
ಮನಸು ಕೊಟ್ಟು ಮನಸೊಳಗೆ ಕುಳಿತು ಬಿಟ್ಟೆಯಾ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ

ಓ ಮನಸೇ ಒಂದು ಮನಸು ಎರಡು ಮನಸು ಎಲ್ಲಾ ಮನಸ ನಿಯಮ
ಓ ಮನಸೆ ಎರಡು ಬಾಳು ಮನಸಲೊಂದೆ ಮನಸು ಇದ್ದರೆ ಪ್ರೇಮ
ಮನಸಾಗೊ ಪ್ರತಿ ಮನಸಿಗು ಮನಸೋತಿರುವ, ಎಳೆ ಮನಸು ಎಲ್ಲ ಮನಸಿನ ಮನಸೇರಲ್ಲ
ಕೆಲ ಮನಸು ನಿಜಮನಸಿನಾಲದ ಮನಸ ಹುಸಿ ಮನಸು ಅಂತ ಮನಸನ್ನು ಮನಸೆನ್ನೊಲ್ಲ
ಮನಸೆ ಮನಸೆ ಹಸಿ ಹಸಿ ಮನಸೆ ಮನಸು ಒಂದು ಮನಸಿರೋ ಮನಸಿನ ತನನನನ
ತಿರುಗೊ ಮನಸಿಗು ಮರಗೊ ಮನಸಿದೆ
ಮರದ ಮನಸಿಗು ಕರಗೊ ಮನಸಿದೆ
ಮೈ ಮನಸಲೆ ಮನಸಿದ್ದರೆ ಮನಸು ಮನಸ ಹಿಡಿತವಿದ್ದರೆ
ಒಮ್ಮಲ ಮನಸಿದ್ದರು ಮುಳುಗೇಳದು ಮನಸು
ಮನಸೆಲ್ಲೊ ಮನಸು ಮಾಡೊ ಮನಸಾಮನಸು

ಮನಸೆ ಓ ಮನಸೆ
ಓ ಮನಸೆ ಮನಸು ಮನಸಲ್ಲಿದ್ದರೇನೆ ಅಲ್ಲಿ ಮನಃಶಾಂತಿ
ಓ ಮನಸೆ ಮನಸು ಮನಸ ಕೇಳಿ ಮನಸು ಕೊಟ್ಟರೆ ಮನಃಸಾಕ್ಷಿ
ಮನಸಾರೆ ಮನಸಿಟ್ಟು ಹಾಡುವ ಮನಸು
ಮನಸೂರಿ ಆಗೋದು ಮನಸಿಗು ಗೊತ್ತು
ಮನಸಿದ್ದರೆ ಮಾರ್ಗಾಂತ ಹೇಳುವ ಮನಸು
ಮನ್ನಿಸುವ ಮನದಲ್ಲಿ ಮನಸಿಡೋ ಹೊತ್ತು
ಮನಸೆ ಮನಸೆ ಬಿಸಿ ಬಿಸಿ ಮನಸೆ ಮನಸು ಒಂದು ಮನಸಿರೊ ಮನಸಿನ ಧಿರನನ
ತುಮುಲ ಮನಸಿಗು ಕೋಮಲ ಮನಸಿದೆ
ತೊದಲು ಮನಸಿಗು ಮೃದುಲ ಮನಸಿದೆ
ಮನಸಿಚ್ಛೆ ಮನಸ ಒಳಗೆ ಮನಸ್ವೇಚ್ಛೆ ಮನಸ ಹೊರಗೆ
ಮನಸ್ಫೂರ್ತಿ ಮನಸ ಪೂರ್ತಿ ಇರುವುದೆ ಮನಸು
ಮನಸೆಲ್ಲೊ ಮನಸು ಮಾಡೊ ಮನಸಾಮನಸು
ಮನಸೇ ಓ ಮನಸೇ, ಮನಸೇ ಎಳೆ ಮನಸೇ
ಮನಸೇ ಒಳ ಮನಸೇ

ಚಿತ್ರ: ಚಂದ್ರಮುಖಿ ಪ್ರಾಣಸಖಿ
ಸಾಹಿತ್ಯ ಮತ್ತು ಸಂಗೀತ: ಕೆ. ಕಲ್ಯಾಣ್
ಗಾಯನ: ಕೆ. ಎಸ್. ಚಿತ್ರಾ


Tag: Manase o manase entha manase

ಕಾಮೆಂಟ್‌ಗಳಿಲ್ಲ: