ಗುರುವಾರ, ಸೆಪ್ಟೆಂಬರ್ 5, 2013

ಜಯ ಶ್ರೀರಾಮ ಜಯ ರಘುರಾಮ

ಜಯ ಶ್ರೀರಾಮ ಜಯ ರಘುರಾಮ


ಜಯ ಶ್ರೀರಾಮ ಜಯ ರಘುರಾಮ
ಜಯಜಯ ಜನಕಜಾ ಪತಿರಾಮ

ಪರಬ್ರಹ್ಮ ಪುರುಷೋತ್ತಮ ರಾಮ
ಪುಣ್ಯನಾಮ ಶ್ರೀ ಸೀತಾರಾಮ
ಪರಾತ್ಪರನೆ ಪುರಹರಮಿತ್ರನೆ ಹರಿ
ಪುರಾಣ ಪುರುಷ ರಾಜಾರಾಮ

ಕೌಶಿಕ ಮುಖಸಂರಕ್ಷಕ ರಾಮ
ಕೋಸಲೇಶ ಶ್ರೀ ಸೀತಾರಾಮ
ಕೌಸಲ್ಯಾ ಸುಖವರ್ಧನ ರಾಮ
ವಿಶ್ವಾಮಿತ್ರ ಪ್ರಿಯಧನ ರಾಮ

ಜನಕಜಾ ಮಾತಾ ಜಾನಕಿಪ್ರೀತ
ಜಗಜ್ಜನಕ ಹರಿ ಸೀತಾರಾಮ
ಜಾಮದಗ್ನಿ ಗರ್ವಾಪಹಾರ
ಜನ್ಮಾದಿರಹಿತ ಜಯ ರಾಜಾರಾಮ

ಪಿತೃವಚನ ಪಾಲಕ ಋಷಿವೇಷಾ
ಭ್ರಾತೃವತ್ಸಲಾ ಸೀತಾರಾಮ
ಶತ್ರುವಿಮರ್ದನ ಮುನಿಜನಪಾಲನ
ಸುತ್ರಾಮವಂದಿತ ರಾಜಾರಾಮ

ಜಟಾಯು  ಶಬರಿ ಮೊಕ್ಷಪ್ರದ ಕಪಿ
ಕಟಕಾನ್ವಿತ ಹರಿ ಸೀತಾರಾಮ
ಕುಟಿಲವಾಲೀ ಸಂಹರಣ ಪ್ರಸವಣ
ಶಿಖರವಾಸಿ ಶ್ರೀ ರಾಜಾರಾಮ

ಹನುಮತ್ಸಖ ಹರಿ ಹನುಮತ್ಸೇವಿತ
ಹನುಮಂತಾರ್ಚಿತ ಸೀತಾರಾಮ
ಹನುಮಗುಂಗುರವನಿತ್ತು ಚೂಡಾಮಣಿ
ಹನುಮನಿಂ ಪಡೆದೆ ರಾಜಾರಾಮ

ಶರಣನ ರಕ್ಷಿಸಿ ಶರಧಿಯ ಬಂಧಿಸಿ
ದುರುಳರ ಕೊಂದಿಹ ಸೀತಾರಾಮ
ಶರಣಗೆ ಪಟ್ಟವಕಟ್ಟಿ ಭರತನ
ಹರಣವಣನುಳಿಸಿದ ರಾಜಾರಾಮ

ಕೋದಂಡಧಾರಿ ಕೋಮಲಾಂಗ ಹರಿ
ಮೂಲನಾರಾಯಣ ಸೀತಾರಾಮ
ಕೋದಂಡರಾಮ ಪಟ್ಟಾಭಿರಾಮ
ಭಕ್ತವಿಶ್ರಾಮ ರಾಜಾರಾಮ

ಸಾಹಿತ್ಯ: ಭದ್ರಗಿರಿ ಅಚ್ಯುತದಾಸರು


Tag: Jaya Sri Rama, Jaya Sree Rama, Jaya Raghuram

ಕಾಮೆಂಟ್‌ಗಳಿಲ್ಲ: