ಬುಧವಾರ, ಸೆಪ್ಟೆಂಬರ್ 4, 2013

ತಾಯೆ ಬಂದು ನೆಲೆಸು

ತಾಯೆ ಬಂದು ನೆಲೆಸು

ತಾಯೆ ಬಂದು ನೆಲೆಸೌ
ಇಂದಿರೆ ಎನ್ನೆಯ ಮಂದಿರದೊಳಗಾನಂದದಿ

ಹಲವು ಕಾಲದಿ ಕಾಣದೆ ನಿಮ್ಮನ್ನು
ಬಳಲುತನಿರ್ಪೆನು ದೇವಿಯೆ
ನಳಿನಾನೇತ್ರೆ ಕರುಣಾದಿಂದಲಿ
ಒಲಿದು ಬಂದಿರಿ ದೇವಿಯೆ

ಮುತ್ತು ಮಾಣಿಕ್ಯದ ಮಂಟಪದಲ್ಲಿ
ರತ್ನದ ಪೀಠವನಿರಿಸುವೆನು
ವಿಷ್ಣು ಸಹಿತಲೆ ಲಕ್ಷ್ಮೀ ನಿಮ್ಮನು
ಅರ್ಥಿಯಿಮ್ ಧ್ಯಾನಿಸಿ ಪೂಜಿಪೆ

ವರಮಣಿ ಖಚಿತದ ನೆರೆಗಿಂಡಿಯೊಳು
ಸುರನದಿ ಗಂಗೆಯ ತುಂಬುತಲಿ
ಸಿರಿವರನರಸಿಯ ಚರಣವ ತೊಳೆದು
ವರವಸ್ತ್ರಗಳಿಂದೊರೆಸುವೆನು

ಅಂಗಜ ಮಾತೆಗೆ ಅಭಿಷೇಕವನು
ಸಂಭ್ರಮದಿಂದಲಿ ಮಾಡುವೆನು
ಅಂದವಾದ ಪೀತಾಂಬರವನು
ಸುಂದರನಡುವಿನೊಳುಡಿಸುವೆನು

ಸಿರಿಮುಡಿಯೆಳೆಸುತ ಹೆರಳನು ಹಾಕುತ
ಪರಿಪರಿ ಕುಸುಮವ ಮುಡಿಸುವೆನು
ಸರಸೀಜಾಕ್ಷಿಗೆ ಸರ್ವಾಭರಣವ
ಪರಮಾದರದಿ ಹಾಕುವೆ

ಅರಶಿನ ಕುಂಕುಮ ಅಕ್ಷತೆ ಗಂಧ
ಪರಿಪರಿ ಕುಸುಮದ ಮಾಲೆಗಳ
ಸಿರಿವರನರಸಿಯ ಕೊರಳಿಗೆ ಹಾರವ
ಪರಮಾದರದಿ ಹಾಕುವೆ

ಪರಿಪರಿ ಪುಷ್ಪದಿಂದೊಡಗೂಡುತಲಿ
ವರಧೂಪಾದಿ ದೀಪಗಳ
ಬಗೆಬಗೆ ಭಕ್ಷ ಪಾಯಸದಿಂದಲೆ
ಮಿಗಿಲಾರೊಗಣೆ ಮಾಡುವೆ

ಮಂಗಳವಾದ್ಯದಿಂದೊಡಗೂಡುತಲಿ
ಅಂಗನೆಯರೆಲ್ಲರು ಹರುಷದಲಿ
ಮಂಗಳಾರತಿ ಎತ್ತಿ ಚಂದದಿ
ವಂದಿಸಿ ನಾನು ಬೇಡುವೆ

ರಕ್ಷಿಸು ರಕ್ಷಿಸು ತಾಯೆ ನಮ್ಮನು
ಪ್ರದಕ್ಷಿಣೆಗಳ ನಾ ಮಾಡುವೆನು
ರಕ್ಷಿಸೆಮ್ಮನು ಲಕ್ಷ್ಮೀ ನಿಮ್ಮನು
ಅರ್ಥಿಯಿಮ್ ಧ್ಯಾನಿಸಿ ಬೇಡುವೆ


Tag: Thaye bandu nelesu, Taye bandoo nelesu

9 ಕಾಮೆಂಟ್‌ಗಳು:

Lakshmi Shrinath ಹೇಳಿದರು...

ee haaDina lyrics nanna snEhite kELiddaru. illirabahudu amta huDukide. kaDegoo sikkitu. huDukuvikeyannu uttama paDisalu saadhyave ?

ತಿರು ಶ್ರೀಧರ ಹೇಳಿದರು...

ಸದ್ಯಕ್ಕೆ ಈಗಿರುವ ಹುಡುಕುವಿಕೆಯ ರೀತಿಯಲ್ಲಿ ಕನ್ನಡದಲ್ಲಿ 'ತಾಯೆ ಬಂದು ನೆಲೆಸೌ' ಅಥವಾ ಇಂಗ್ಲಿಷಿನಲ್ಲಿ Thaye bandu nelesu' ಎಂದು ಟೈಪ್ ಮಾಡಿದರೆ ಬರುವ ವ್ಯವಸ್ಥೆ ಇದೆ. ತಾವು ಹೇಳಿದ ಹಾಗೆ ಮತ್ತಷ್ಟು ಉತ್ತಮಗೊಳಿಸುವ ಆಶಯ ಇದೆ. ಖಂಡಿತ ಪ್ರಯತ್ನಿಸುತ್ತೇನೆ. ಧನ್ಯವಾದಗಳು. ನಮಸ್ಕಾರ

Lakshmi Shrinath ಹೇಳಿದರು...

Naanu baraha reetiyalli "taaye baMdu nelesou" eMdu 2-3 reetiyalli prayatniside. sigalilla. But thanks for your reply and for posting the lyrics of so many wonderful songs!

R R Rao ಹೇಳಿದರು...

Bandu nelasou Mahalskshmi devige..antha namma thaayi haadutthidaru.kelavu saalugalu marethittu.Eee haadannu nodi thumba thumba santhoshavaayithu! YOU MADE MY DAY!

raga ಹೇಳಿದರು...

Thank you so much for posting the lyrics. My aunt used to sing this song. It has been many many years since I heard it. Is it possible to post an mp3 recording of this song? May you stay blessed.

NarayanNS ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
NarayanNS ಹೇಳಿದರು...

Correction. Read so nice to listen to.

shubha ಹೇಳಿದರು...

Haadina Pallavi yalli
Andavada paada padmake vandisi beduvenoo taaye
Ee salu Namma version Nalli iratte
Thanks for posting the song

Unknown ಹೇಳಿದರು...

in my version, after first saalu, ಚೆಂದವಾದ ಪಾದಪದ್ಮಕೆ ಆನಂದದಿ ಪೂಜೆಯ ಮಾಡುವೆನು yendu ide
May God bless you! This song is so captivating, I keep singing it involuntarily!