ಶನಿವಾರ, ಸೆಪ್ಟೆಂಬರ್ 7, 2013

ಕಣ್ಣೀರ ಧಾರೆ ಇದೇಕೆ ಇದೇಕೆ

ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನಾ ಹೂವೆ ಈ ಶೋಕವೇಕೆ

ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ಬರುವುದು ಬರಲೆಂದು ನಗುನಗುತ ಬಾಳದೆ
ನಿರಾಸೆ ವಿಷಾದ ಇದೇಕೆ ಇದೇಕೆ

ಬಾಳೆಲ್ಲಾ ನನಗೆ ಇರುಳಾದರೇನು?
ಜತೆಯಾಗಿ ಎಂದೆಂದೂ ನೀನಿಲ್ಲವೇನು
ನಾ ನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಿನ್ನಲ್ಲಿ ನೋವು ಇದೇಕೆ ಇದೇಕೆ

ಚಿತ್ರ: ಹೊಸಬೆಳಕು
ಸಾಹಿತ್ಯ: ಚಿ. ಉದಯಶಂಕರ್.
ಸಂಗೀತ: ಎಂ. ರಂಗರಾವ್.
ಗಾಯನ: ಡಾ. ರಾಜ್ ಕುಮಾರ್ .


Tag: Kanneera dhaare idheke idheke, Kanneeral dhaare ideke ideke

ಕಾಮೆಂಟ್‌ಗಳಿಲ್ಲ: