ಮಂಗಳವಾರ, ಸೆಪ್ಟೆಂಬರ್ 3, 2013

ಈದ್ ಉಲ್ ಫಿತರ್

ಈದ್ ಉಲ್ ಫಿತರ್

ರಮಜಾನ್ ಹಬ್ಬದ ಸಮಯದಲ್ಲಿ ಒಂದು ತಿಂಗಳ ವರೆಗೆ ನಿಷ್ಠೆ, ಶ್ರದ್ಧೆ, ಭಕ್ತಿಗಳೊಂದಿಗೆ ಹಲವು ರೀತಿಯಲ್ಲಿ ದೇಹ, ಮನಸ್ಸು ಆತ್ಮಗಳ ಶುದ್ಧತೆಗಳ ಆಚರಣೆಗಳನ್ನುನಡೆಸಿ,  ಉಳ್ಳವರು ಇಲ್ಲದವರಿಗೆ ಕೊಡುವ ಮನೋಭಾವ ತೋರಿ, ಪ್ರೀತಿ ವಿಶ್ವಾಸಗಳ ವಿನಿಮಯದೊಂದಿಗೆ ನಮ್ಮ ಹಲವಾರು ಸಹೋದರ ಸಹೋದರಿಯರು ಇದೀಗ ಈದ್ ಉಲ್ ಫಿತರ್ ಹಬ್ಬ ಆಚರಿಸುತ್ತಿದ್ದೀರಿ.  ತಮಗೆಲ್ಲರಿಗೂ ಹಬ್ಬದ ಆತ್ಮೀಯ ಶುಭ ಹಾರೈಕೆಗಳು.  ತಮ್ಮೆಲ್ಲರ ಈ ಸಂತಸದ ಸಮಯಕ್ಕೆ ನಮ್ಮೆಲ್ಲರ ಆತ್ಮೀಯ ಹ್ರುದ್ಭಾವಗಳು ನಿಮ್ಮೊಂದಿಗಿವೆ.

ಪರಮಾತ್ಮನು ತಮಗೂ, ತಮ್ಮ ಕುಟುಂಬದವರಿಗೂ ಒಳಿತು ಉಂಟುಮಾಡಲಿ.  ನಮ್ಮೆಲ್ಲರ ಬಾಂಧವ್ಯ ನಿತ್ಯನೂತನವಾಗಿದ್ದು ಉತ್ತಮ ರೀತಿಯ ಸ್ನೇಹ ಬಾಂಧವ್ಯ, ಸಹಬಾಳ್ವೆ, ಸಮಾನಮನೋಭಾವಗಳ ಸಹಜೀವನಕ್ಕೆ ಸದಾ ಪ್ರೇರಕವಾಗಿರಲಿ.

Tag: Eid Ul Fitr

ಕಾಮೆಂಟ್‌ಗಳಿಲ್ಲ: