ಶುಕ್ರವಾರ, ಸೆಪ್ಟೆಂಬರ್ 6, 2013

ತೂಗುವೆ ರಂಗನ ತೂಗುವೆ ಕೃಷ್ಣನ

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ

ಮೇಲುಕೋಟೆಯಸ್ವಾಮಿ ಚೆಲುವರಾಯನ 
ಬೇಲೂರ ಶ್ರೀಚೆನ್ನಕೇಶವನ
ಉಡುಪಿಯಲಿ ವಾಸಿಸುವ ಶ್ರೀಕೃಷ್ಣನ
ಶ್ರೀರಂಗಪಟ್ಟಣದಿ ಮಲಗಿದವನ

ಕಣ್ಣಲ್ಲೆ ಹುಣ್ಣಿಮೆ ತಂದವನ,
ನುಡಿಯಲ್ಲೆ ಮಲ್ಲಿಗೆ ಚೆಲ್ಲುವನ
ಚೆಲುವಲ್ಲೆ ತಾವರೆಯ ನಾಚಿಸುವನ,
ಈ ಮನೆಯ ಬೆಳಗಾಗಿ ಬಂದವನ

ಆಲದೆಲೆಯಮೇಲೆ ಮಲಗಿದವನ
ಹತ್ತವತಾರದ ಪರಮಾತ್ಮನ
ಮತ್ತೆ ನಮಗಾಗಿಳೆಗೆ ಬಂದವನ,
ಜಗವನ್ನೇ ತೂಗುವ ಜಗದೀಶನ

ಚಿತ್ರ: ಅನುರಾಧಾ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಪಿ. ಬಿ. ಶ್ರೀನಿವಾಸ್


Tag: Tuguve rangana tuguve krishnana, Tooguve rangana tooguve krishnana

ಕಾಮೆಂಟ್‌ಗಳಿಲ್ಲ: