ಬುಧವಾರ, ಸೆಪ್ಟೆಂಬರ್ 4, 2013

ಜಯ ಜಾನಕೀಕಾಂತ


ಜಯ ಜಾನಕೀಕಾಂತ ಜಯ ಸಾಧುಜನ ವಿನುತ
ಜಯತು ಮಹಿಮಾವಂತ ಜಯ ಭಾಗ್ಯವಂತ ಜಯ ಜಯ

ದಶರಥನ ಮಗ ವೀರ ದಶಕಂಠ ಸಂಹಾರ
ಪಶುಪತೀಶ್ವರಮಿತ್ರ ಪಾವನಚರಿತ್ರ
ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ
ಅಸಮಸಾಹಸಶಿಕ್ಷ ಅಂಬುಜದಳಾಕ್ಷ

ಸಾಮಗಾನಲೋಲ ಸಾಧುಜನಪರಿಪಾಲ
ಕಾಮಿತಾರ್ಥವಿದಾತ ಕೀರ್ತಿಸಂಜಾತ
ಸೋಮಸೂರ್ಯಪ್ರಕಾಶ ಸಕಲ ಲೋಕಾಧೀಶ
ಶ್ರೀಮಹಾರಘುವೀರ ಸಿಂಧುಗಂಭೀರ

ಸಕಲ ಶಾಸ್ತ್ರವಿಚಾರ ಶರಣಜನಮಂದಾರ
ವಿಕಸಿತಾಂಬುಜವದನ ವಿಶ್ವಮಯಸದನ
ಸುಕೃತಮೋಕ್ಷಾಧೀಶ ಸಾಕೇತಪುರವಾಸ
ಭಕ್ತವತ್ಸಲ ರಾಮ ಪುರಂದರವಿಠ್ಠಲ

ಸಾಹಿತ್ಯ: ಪುರಂದರದಾಸರುTag: Jaya janakikantha

ಕಾಮೆಂಟ್‌ಗಳಿಲ್ಲ: