ಮಂಗಳವಾರ, ಸೆಪ್ಟೆಂಬರ್ 3, 2013

ಹೋದ ವರುಷ ಬಂದ ಹಬ್ಬ


ಹೋದ ವರುಷ ಬಂದ ಹಬ್ಬ
ಹೋದ ವರುಷ ಹೊಳೆದ ಬೆಳಕು
ಮತ್ತೆ ಮರಳಿ ಬಂದಿತಿಂದು
ಮತ್ತೆ ಮರಳಿ ಹೊಳೆಯಿತಿಂದು

ಅಂದು ಕಂಡ ಇಳೆಯ ಹಸಿರು
ಅಂದು ಕಂಡ ಬೆಳೆಯ ಉಸಿರು
ಕಣ್ಗೆ  ಮತ್ತೆ ಮುಕ್ತಿ ನೀಡಿ
ಜನ್ಮಕ್ಕೆ ಉಸಿರು ತಂದಿತಿಂದು

ಬೆಳಕನಿದನು ಕಾಣಲಿಕ್ಕೆ
ದೀಪವಿದನು ಹಚ್ಚಲಿಕ್ಕೆ
ಒಂದು ವರುಷ ಕಾಯಬೇಕೇ
ಒಂದು ವರುಷ ಕಳೆಯಬೇಕೇ

ಒಮ್ಮೆ ಹೊಳೆದ ದೀಪ ನಂದಿ
ಒಮ್ಮೆ ಕಂಡ ಕಿರಣ ಅಡಗಿ
ಒಮ್ಮೆ ಕಳೆದ ನಲಿವು ತೊಲಗಿ
ಮತ್ತೆ ಬಳಲಿ ಬಾಡಲೇಕೆ?

ಮನದ ಇಳೆಯ ಹಸುರಿನಲ್ಲಿ
ಗುಣದ ಬೆಳೆಯ ಸುಳಿಯ ತೆಗೆದು
ಒಳಗೆ ದೀಪ ಹಚ್ಚಿ  ನಲಿದು
ಬೆಳಕಿನೊಳಗೆ ಬೆಳಕ ಕಾಣೆ
ಎಂದಿಗೂ ದೀಪೋತ್ಸವ,
ಎಂದಿಗೂ ದಿವ್ಯೋತ್ಸವ

ಸಾಹಿತ್ಯ: ಆರ್. ಸಿ. ಭೂಸನೂರ ಮಠ


Tag: Hoda Varusha Banda Habba

ಕಾಮೆಂಟ್‌ಗಳಿಲ್ಲ: