ಬುಧವಾರ, ಸೆಪ್ಟೆಂಬರ್ 4, 2013

ಕೃಷ್ಣಮೂರ್ತಿ ಕಣ್ಣಮುಂದೆ


ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದ್ದಂತಿದೆ
ಕಷ್ಟಗಳೆಲ್ಲವ ಪರಿಹರಿಸಿ ಮನ
ದಿಷ್ಟಾರ್ಥಗಳನೆಲ್ಲ ಕೊಟ್ಟು ರಕ್ಷಿಸುವಂಥ

ಮಸ್ತಕದಲಿ ಮಾಣಿಕದ ಕಿರೀಟ
ಕಸ್ತೂರಿ ತಿಲಕದಿ ಹೊಳೆವ ಲಲಾಟ
ಶಿಸ್ತಿಲಿ ಕೊಳಲ ಊದುವ ಓರೆನೋಟ
ಕೌಸ್ತುಭ ಎಡಬಲದಲ್ಲಿ ಓಲಾಟ

ಮಘಮಘಿಸುವ ಸೊಬಗಿನ ಸುಳಿಗುರುಳು
ಚಿಗುರು ತುಳಸಿವನ ಮಾಲೆಯ ಕೊರಳು
ಬಗೆಬಗೆ ಹೊನ್ನ ಮುದ್ರಿಕೆಯಿಟ್ಟ ಬೆರಳು
ಸೊಬಗಿನ ನಾಭಿಯ ತಾವರೆ ಅರಳು

ಉಡುದಾರ ಒಡ್ಯಾಣ ಸಕಲಾಭರಣ
ಬೆಡಗು ಪೀತಾಂಬರ ಶತರವಿ ಕಿರಣ
ಕಡಗ ಗಗ್ಗರಿಪೆಂಡೆಗಳನಿಟ್ಟ ಚರಣ
ಒಡೆಯ ಪುರಂದರವಿಠಲನ ಕರುಣ

ಸಾಹಿತ್ಯ: ಪುರಂದರದಾಸರು


Tag: Krishnamurthy kannamunde 

ಕಾಮೆಂಟ್‌ಗಳಿಲ್ಲ: