ಮಂಗಳವಾರ, ಸೆಪ್ಟೆಂಬರ್ 3, 2013

ಅಂತಃಪುರ ಗೀತೆಗಳು


ಏನೀ ಮಹಾನಂದವೇ ಓ ಭಾಮಿನಿ
ಏನೀ ಸಂಭ್ರಮದಂದವೇ ಬಲು ಚಂದವೇ 
ಏನೀ ವೃತಾಮೋದ ಏನೀ ಮುರಜ ನಾದ
ಏನೀ ಜೀವೋನ್ಮಾದ ಏನೀ ವಿನೋದ 

ಢಕ್ಕೆಯ ಶಿರಕೆತ್ತಿ ತಾಳಗೋಲಿಂ ತಟ್ಟಿ
ತಕ್ಕಿಟ ಧಿಮಿಕಿಟ ತಕಝಣುರೆನಿಸಿ
ಕುಕ್ಕುತೆ ಚರಣವ ಕುಲುಕುತೆ ಕಾಯವ
ಸೊಕ್ಕಿದ ಕುಣಿತವ ಕುಣಿವೆ ನೀನೆಲೆ ಬಾಲೆ

ಆರು ನಿನ್ನಯ ಹೃದಗಾರದೆ ನರ್ತಿಸಿ
ಮಾರ ಶೂರತೆಯ ಪ್ರಕಾಶಿಸುತಿರ್ಪನ್ 
ಸ್ಮೇರವದನ ನಮ್ಮ ಚೆನ್ನಕೇಶವ ರಾಯ
ಓರೆಗಣ್ಣಿಂ ಸನ್ನೆ ತೋರುತಲಿಹನೇನೆ 

ಸಾಹಿತ್ಯ: ಡಿ.ವಿ. ಗುಂಡಪ್ಪ
(ಅಂತಃಪುರ ಗೀತೆಗಳು)Photo Courtesy: Rumilus (http://www.flickr.com/photos/rumilus/1069555663/sizes/z/in/photostream/)

Tag: Antahpura Geethegalu, Enee Mahaanandave

ಕಾಮೆಂಟ್‌ಗಳಿಲ್ಲ: