ಶುಕ್ರವಾರ, ಸೆಪ್ಟೆಂಬರ್ 6, 2013

ರಾಗ ಅನುರಾಗ ಶುಭಯೋಗ ಸೇರಿದೆ


ರಾಗ ಅನುರಾಗ ಶುಭಯೋಗ ಸೇರಿದೆ
ತಂದ ಅನುಬಂಧ ಆನಂದ ತಂದಿದೆ
ರಾಗ
ರಾಗ ಅನುರಾಗ ಶುಭಯೋಗ ಸೇರಿದೆ

ರಾಗ ತಾಳ ಮಿಲನ ಸಂಗೀತವಾಗಿದೆ
ನಾದ ಲಾಸ್ಯ ಮಿಲನ ಹೊಸಭಾವ ಮೂಡಿದೆ ಹೊಸಗೀತೆ ಹಾಡಿದೆ
ಹೂವು ಗಂಧದಂತೆ ನಮ್ಮ ಜೀವ ಜೀವ ಸೇರಿ ಉಯ್ಯಾಲೆ ಆಡಿದೆ
ರಾಗ ಅನುರಾಗ ಶುಭಯೋಗ ಸೇರಿದೆ

ಹೃದಯ ವೀಣೆ ಮೀಟಿ ಹೊಸ ತಾನ ನುಡಿಸಿದೆ
ಗಾನಗಂಗೆಯಲ್ಲಿ ತೇಲಾಡಿದಂತಿದೆ ಸುರಲೋಕ ಕಂಡಿದೆ
ಗಂಗೆ ಶಿವನ ವರಿಸಿ ಶಿರವೇರಿದಂತೆ ನನ್ನ ಬಾಳಿಂದು ಆಗಿದೆ
ರಾಗ ಅನುರಾಗ ಶುಭಯೋಗ ಸೇರಿದೆ

ಬಾಳ ನದಿಯು ಇಂದು ಹೊಸ ಹಾದಿ ಹಿಡಿದಿದೆ
ಪ್ರಣಯವೆಂಬ ವನವ ಹಾಯಾಗಿ ಬಳಸಿದೆ
ಪ್ರಣಯವೆಂಬ ವನವ ಹಾಯಾಗಿ ಬಳಸಿದೆ ಉಲ್ಲಾಸ ಕಂಡಿದೆ
ಹರುಷವೆಂಬ ಕಡಲ
ಅಲೆಅಲೆಯು ತೇಲಿ ಬಂದು ಈ ನದಿಯ ಸೇರಿದೆ
ರಾಗ
ರಾಗ ಅನುರಾಗ ಶುಭಯೋಗ ಸೇರಿದೆ

ಚಿತ್ರ: ಸನಾದಿ ಅಪ್ಪಣ್ಣ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ರಾಜ್ ಕುಮಾರ್ ಮತ್ತು ಎಸ್. ಜಾನಕಿ
Tag: Raga anuraga shubha yoga seride

ಕಾಮೆಂಟ್‌ಗಳಿಲ್ಲ: