ಮಂಗಳವಾರ, ಸೆಪ್ಟೆಂಬರ್ 3, 2013

ಶರಣು ಶರಣುವಯ್ಯ ಗಣನಾಯ್ಕ

ಶರಣು ಶರಣುವಯ್ಯ ಗಣನಾಯ್ಕ


ಶರಣು ಶರಣುವಯ್ಯ ಗಣನಾಯ್ಕ
ನಮ್ಮ ಕರುಣದಿಂದಲಿ ಕಾಯೊ ಗಣನಾಯ್ಕ

ಎಳ್ಳುಂಡೆ ಜೇನುತುಪ್ಪ ಗಣನಾಯ್ಕ
ನಮಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ.
ಉದ್ದು ಹೋಳಿಗೆ ತುಪ್ಪ ಗಣನಾಯ್ಕ
ನಿಮ್ಗೆ ತಪ್ಪದೆ ಒಪ್ಪಿಸುವೆ ಗಣನಾಯ್ಕ.

ಗೊನೆಮೇಗ್ಲ ಬಾಳೆಹಣ್ಣು ಗಣನಾಯ್ಕ
ನಿಮ್ಗೆ ಕಳಿಅಡ್ಕೆ ಚಿಗುರೆಲೆ ಗಣನಾಯ್ಕ
ಕೊಂಬೆಮೇಗ್ಲ ನಿಂಬೆಹಣ್ಣು ಗಣನಾಯ್ಕ
ನಿಮ್ಗೆ ಒಡಗಾಯಿ ಇಡಗಾಯಿ ಗಣನಾಯ್ಕ.

ಕರ್ಪೂರ ಸಾಂಬ್ರಾಣಿ ಗಣನಾಯ್ಕ
ನಿಮ್ಗೆ ಮರುಗ ಮಲ್ಲಿಗೆ ಜಾಜಿ ಗಣನಾಯ್ಕ
ಹಸುರಂಗಿ ಕಾಲ್ಗಡಗ ಗಣನಾಯ್ಕ
ನಿಮ್ಗೆ ಕುಶಲದ ಮೇಲ್ಕಟ್ಟು ಗಣನಾಯ್ಕ.

ಮೂಷಕ ವಾಹನ ಗಣನಾಯ್ಕ
ನಮ್ಮ ಶಿವನ ಕುಮಾರನಯ್ಯ ಗಣನಾಯ್ಕ
ನಿನ್ಗೆ ಹೆಂಡ್ರಿಲ್ಲ ಮಕ್ಲಿಲ್ಲ ಗಣನಾಯ್ಕ
ನೀ ಎದ್ದು ಬಾರಯ್ಯ ಸಿದ್ದಿ ಗಣನಾಯ್ಕ.

ಬಿಲ್ಪತ್ರೆ ವನದಲಿ ಗಣನಾಯ್ಕ
ನಿನ್ನ ಧ್ಯಾನ ಮಾಡಿ ನೆನ್ದೇವಯ್ಯ ಗಣನಾಯ್ಕ.
ಕಂಟಕ ಹರ ನೀನು ಗಣನಾಯ್ಕ
ನಮ್ಗೆ ವರವನು ಪಾಲಿಸಯ್ಯ ಗಣನಾಯ್ಕ.

(ಕೋಲಾಟದ ಪದ)

Tag: Sharanu sharanuvayya Gananayaka

ಕಾಮೆಂಟ್‌ಗಳಿಲ್ಲ: