ಭಾನುವಾರ, ಸೆಪ್ಟೆಂಬರ್ 8, 2013

ಉಡುಗೊರೆಯೊಂದ ತಂದ


ಉಡುಗೊರೆಯೊಂದ ತಂದ
ಎನ್ನಯ ಮನದಾನಂದ
ಮನವನು ತಣಿಸಲು ಬಂದ
ಹೊಸಿಲಲಿ ನಗುತಲಿ ನಿಂದ

ನೀನೆ ನನ್ನವಳೆಂದ
ಕಿವಿಯಲಿ ಪಿಸುಮಾತಿಂದ
ಮೊಗವೆಂಬ ಅರವಿಂದ
ಕೆಂಪಾಯಿತು ನಾಚಿಕೆಯಿಂದ

ಪ್ರೇಮದ ಕಾಣಿಕೆಯೊಂದ
ತಂದಿಹೆ ನಾನಿನಗೆಂದ
ಜಡೆಯೆಳೆದ ಮುದದಿಂದ
ಬಿಡುವೆನೆ ನಾ ಬಿಡೆನೆಂದ

ಚಿತ್ರ: ನಾಂದಿ
ರಚನೆ: ಆರ್. ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್. ಜಾನಕಿ


Tag: Udugoreyonda Tanda