ಶನಿವಾರ, ಸೆಪ್ಟೆಂಬರ್ 7, 2013

ಪೂಜಿಸಲೆಂದೇ ಹೂಗಳ ತಂದೆ

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ
ತೆರೆಯೋ ಬಾಗಿಲನು ರಾಮ

ಮೋಡದಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರತಿ ಉಷೆತಂದಿಹಳು
ತಾಮಸವೇಕಿನ್ನು ಸ್ವಾಮಿ,
ತೆರೆಯೋ ಬಾಗಿಲನು, ರಾಮ

ಒಲಿದರು ಚೆನ್ನ, ಮುನಿದರು ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ಸ್ವೀಕರಿಸು ನನ್ನಾ, ಸ್ವಾಮಿ
ತೆರೆಯೋ ಬಾಗಿಲನು, ರಾಮ

ಚಿತ್ರ: ಎರಡು ಕನಸು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಎಸ್ ಜಾನಕಿ


Tag: Pujisalende hugala tande, poojisalende hoogala tande

ಕಾಮೆಂಟ್‌ಗಳಿಲ್ಲ: