ಗುರುವಾರ, ಸೆಪ್ಟೆಂಬರ್ 5, 2013

ಮರೆಯಬೇಡ ಮನವೆ ನೀನು


ಮರೆಯಬೇಡ ಮನವೆ ನೀನು
ಹರಿಯ ಸ್ಮರಣೆಯ

ಯಾಗಯಜ್ಞ ಮಾಡಲೇಕೆ 
ಯೋಗಿಯತಿಯು ಆಗಲೇಕೆ
ನಾಗಶಯನ ನಾರದನುತನ 
ಕೂಗಿ ಭಜನೆಮಾಡೋ

ಸತಿಯು ಸುತರು ಹಿತರು ಎಂದು 
ಮತಿಯುಗೆಟ್ಟು ಕೆಡಲಿಬೇಡ
ಗತಿಯು ತಪ್ಪಿ ಹೋಗುವಾಗ 
ಸತಿಯು ಸುತರು ಬರುವರೇ             

ಹರಿಯ ಸ್ಮರಣೆ ಮಾತ್ರದಿಂದ
ಘೋರದುರಿತವೆಲ್ಲ ನಾಶ
ಪರಮಪುರುಷ  ಶ್ರೀ ಪುರಂದರ 
ವಿಠಲರಾಯ ಪದವಿ ಕೊಡುವ

ಸಾಹಿತ್ಯ: ಪುರಂದರದಾಸರು

Tag: Mareyabeda manave neenu

ಕಾಮೆಂಟ್‌ಗಳಿಲ್ಲ: