ಸೋಮವಾರ, ಸೆಪ್ಟೆಂಬರ್ 2, 2013

ಪುಲ್ಲೇಲ ಗೋಪಿಚಂದ್

ಪುಲ್ಲೇಲ ಗೋಪಿಚಂದ್

ಭಾರತಕ್ಕೆ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಕೀರ್ತಿ ತಂಡ ಪುಲ್ಲೇಲ ಗೋಪೀಚಂದ್ ಅವರು ನವೆಂಬರ್ 16, 1973ರಲ್ಲಿ ಆಂಧ್ರಪ್ರದೇಶದ ನಗಾಂಡ್ಲ ಗ್ರಾಮದಲ್ಲಿ ಜನಿಸಿದರು.  ಪ್ರಕಾಶ್ ಪಡುಕೋಣೆ ಅವರ ನಂತರದಲ್ಲಿ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಏಕೈಕ ಭಾರತೀಯರು ಗೋಪೀಚಂದ್.  ತಮ್ಮ ಆಟದ ಶ್ರೇಷ್ಟತೆಗೆ ರಾಜೀವ್ ಖೇಲ್ ರತ್ನ, ಅರ್ಜುನ ಪ್ರಶಸ್ತಿಗಳನ್ನು ಮಾತ್ರವಲ್ಲದೆ ಇಂದು ವಿಶ್ವ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಸೈನಾ ನೆಹವಾಲ್ ಅಂತಹ ಪ್ರತಿಭೆಗಳನ್ನು ಪೋಷಿಸಿ ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಕೀರ್ತಿ ಕೂಡಾ ಗೋಪೀಚಂದ್ ಅವರದು.

Tag: Pullela Gopichand

ಕಾಮೆಂಟ್‌ಗಳಿಲ್ಲ: