ಮಂಗಳವಾರ, ಸೆಪ್ಟೆಂಬರ್ 3, 2013

ನಾನೇ ವೀಣೆ ನೀನೇ ತಂತಿ


ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ

ಮಿಡಿದ ನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು ನಾದ ರೂಪಕ

ಭುವನವೆಲ್ಲ ಸವಿಯಸೊಲ್ಲ ಕವಿಯ ಗಾನ
ನನ್ನ ನಿನ್ನ ಹೃದಯ ವೀಣಾ ಕಲ್ಲಿಜೇನ ಸೊಗದ ಸ್ನಾನ

ತಂತಿ ಇಂಚರ ದೀವಿ ಪಂಚಿ ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ ತಾನ ತನನ ತಾನ ಪ್ರಾಣ ಪುಳಕಿಸೆ

ಸಾಹಿತ್ಯ: ಕುವೆಂಪು


Tag: Naane Veene Neene Thanti, Nane Vene Nine tanti


ಕಾಮೆಂಟ್‌ಗಳಿಲ್ಲ: