ಶುಕ್ರವಾರ, ಸೆಪ್ಟೆಂಬರ್ 6, 2013

ನಿನ್ನ ನೀನು ಮರೆತರೇನು ಸುಖವಿದೆ


ನಿನ್ನ ನೀನು ಮರೆತರೇನು ಸುಖವಿದೆ

ತನ್ನತನವ ತೊರೆದರೇನು ಸೊಗಸಿದೆ

ಹಾಡುವುದನು ಕೋಗಿಲೆಯು ಮರೆಯುವುದೇ
ಹಾರುವುದನು ಬಾನಾಡಿ ತೊರೆಯೆವುದೆ
ಮೀನು ಈಜದಿರುವುದೆ, ದು೦ಬಿ ಹೂವ ಮರೆವುದೆ
ಮುಗಿಲ ಕ೦ಡ ನವಿಲು ನಲಿಯದೆ
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ

ಗಾಳಿ ತನ್ನ ಚಲನೆಯನ್ನು ಮರೆಯುವುದೆ
ಬೆಳ್ಳಿ ಮೋಡ ತೇಲದೆ ನಿಲ್ಲುವುದೆ
ತಾರೆ ಮಿನುಗದಿರುವುದೆ, ಮಿ೦ಚು ಹೊಳೆಯದಿರುವುದೆ
ನದಿಯು ಕಡಲ ಸ್ನೇಹ ಮರೆವುದೆ

ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ಪಿ. ಸುಶೀಲ


ಇದೇ ಗೀತೆ ಎಸ್. ಪಿ. ಬಾಲ ಸುಬ್ರಹ್ಮಣ್ಯಂ ಅವರ ಧ್ವನಿಯಲ್ಲಿ


Tag: Ninna neenu maretarenu sukhavide

ಕಾಮೆಂಟ್‌ಗಳಿಲ್ಲ: