ಶನಿವಾರ, ಸೆಪ್ಟೆಂಬರ್ 7, 2013

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ

ಆಗದು ಎಂದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು

ಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ
ಆಗುತಿತ್ತೆ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
 ಬೇಲೂರು ಹಳೆಬೀಡು, ಬೇಲೂರು ಹಳೆಬೀಡು

ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಬಂಗಾರ ಬೆಳೆವ ಹೊನ್ನಾಡು,
ಆಹಾ, ಬಂಗಾರ ಬೆಳೆವ ಹೊನ್ನಾಡು,
ಆಗುತಿತ್ತೆ ಈ ನಾಡು
 ಕನ್ನಡ ಸಿರಿನಾಡು, ನಮ್ಮ ಕನ್ನಡ ಸಿರಿನಾಡು

ಕೈಕೆಸರಾದರೆ ಬಾಯಿ ಮೊಸರೆಂಬ
 ಹಿರಿಯರ ಅನುಭವ ಸತ್ಯ,
ಇದ ನೆನಪಿಡಬೇಕು ನಿತ್ಯ,
ದುಡಿಮೆಯ ನಂಬಿ ಬದುಕು,
ಅದರಲೆ ದೇವರ ಹುಡುಕು,
ಬಾಳಲಿ ಬರುವುದು ಬೆಳಕು,
ನಮ್ಮ ಬಾಳಲಿ ಬರುವುದು ಬೆಳಕು

ಚಿತ್ರ: ಬಂಗಾರದ ಮನುಷ್ಯ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಜಿ.ಕೆ.ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್

Tag: Aagadu endu kaikatti kulitare

ಕಾಮೆಂಟ್‌ಗಳಿಲ್ಲ: