ಭಾನುವಾರ, ಸೆಪ್ಟೆಂಬರ್ 1, 2013

ರಾವ್ ತುಲಾ ರಾಮ್

ರಾವ್ ತುಲಾ ರಾಮ್

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಸೇನಾನಿ, ನಾಯಕ, ದಕ್ಷ ಆಡಳಿತಗಾರ ಎಂದು ಹೆಸರಾಗಿದ್ದ ರಾವ್ ತುಲಾರಾಂ ಜನಿಸಿದ ದಿನ ಡಿಸೆಂಬರ್ 9, 1825.  ಸ್ವಾತಂತ್ಯ್ರ ಸಂಗ್ರಾಮದ ಸಮಯದಲ್ಲಿ ಹರಿಯಾಣ, ದೆಹಲಿ ಪ್ರದೇಶಗಳಲ್ಲಿ ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿದ್ದ ರಾವ್ ತುಲಾರಾಂ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತದಿಂದ ಹೊರನಡೆದು ಇರಾನ್, ಆಫ್ಘಾನಿಸ್ಥಾನ, ರಷ್ಯಾ ಮುಂತಾದ ಕಡೆಗಳಲ್ಲಿ ಬ್ರಿಟಿಷರ ವಿರುದ್ಧ ಸೇನೆಯನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದರು.  ಆದರೆ ಕೇವಲ 38ನೆಯ ವಯಸ್ಸಿನಲ್ಲಿ 1863ರ ವರ್ಷದಲ್ಲಿ ಅಂತ್ಯಗೊಂಡ ಈ ಮಹಾನ್ ನಾಯಕನ ಮರಣದೊಂದಿಗೆ ಆತನ ಕನಸುಗಳಿಗೂ ತೆರೆಬಿತ್ತು.


ಕಾಮೆಂಟ್‌ಗಳಿಲ್ಲ: