ಶುಕ್ರವಾರ, ಸೆಪ್ಟೆಂಬರ್ 6, 2013

ಬಿಸಿಲಾದರೇನು ಮಳೆಯಾದರೇನು

ಬಿಸಿಲಾದರೇನು ಮಳೆಯಾದರೇನು
ಜೊತೆಯಾಗಿ ಎಂದೂ ನಾನಿಲ್ಲವೇನು
ನೀ ನನ್ನ ಜೀವಾ ಎಂದಿಗೂ

ಹೂವು ಹಾವಾದರೇನು ಹಾಲು ವಿಷವಾದರೇನು
ಈ ನಿನ್ನ ನೋಟ ಬೆರೆತಾಗ ಮುಳ್ಳು
ಹೂವಾಗಿ ಅರಳದೇನು
ಭುವಿಯೇ ಬಾಯ್ಬಿಟ್ಟರೇನು ಸಿಡಿಲೆ ಎದುರಾದರೇನು
ನನ್ನಾಣೆ ನಲ್ಲೆ ನಾ ನಿನ್ನ ಬಿಡೆನು
ಪ್ರಾಣಕ್ಕೆ ಪ್ರಾಣ ಕೊಡುವೆ
ಕಂಬನಿ ಮಿಡಿಯದೇ ಇನ್ನು ನಗಲಾರೆಯೇನು
ಬಿಸಿಲಾದರೇನು ಮಳೆಯಾದರೇನು...

ಸೆಳೆವ ಸುಳಿಯಾದರೇನು ಬೆಂಕಿಯ ಬಲೆಯಾದರೇನು
ಈ ಬಾಳು ಇನ್ನು ಹೋರಾಟ ತಾನೇ
ಬಿಡು ಇನ್ನು ಚಿಂತೆಯನ್ನು
ಯಾರೇನು ಅಂದರೇನು ಊರೇ ಎದುರಾದರೇನು
ಕೊನೆತನಕ ನಾನು ಹೋರಾಡಿ ಗೆಲುವೆ
ನಿನ್ನನ್ನು ನಾನು ಬಿಡೆನು
ಕೊರಗದೆ ನಡುಗದೆ ನಲ್ಲೆ ನಗಲಾರೆಯೇನು
ಬಿಸಿಲಾದರೇನು ಮಳೆಯಾದರೇನು...

ಚಿತ್ರ: ಬೆಂಕಿಯ ಬಲೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ

Tag: Bisiladarenu maleyadarenu


ಕಾಮೆಂಟ್‌ಗಳಿಲ್ಲ: