ಬುಧವಾರ, ಸೆಪ್ಟೆಂಬರ್ 25, 2013

ಈ ಮೌನವಾ ತಾಳೆನು

ಈ ಮೌನವಾ ತಾಳೆನು
ಈ ಮೌನವಾ ತಾಳೆನು, ಮಾತಾಡೆ ದಾರಿಯ ಕಾಣೆನು
ಓ ರಾಜಾ. ಈ ಮೌನವಾ ತಾಳೆನು
ನೀ ಹೇಳದೇ ಬಲ್ಲೆನು, ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣೀ, ನೀ ಹೇಳದೇ ಬಲ್ಲೆನು

ನಾನಂದು ನಿನ್ನ, ಕಂಡಾಗ ಚಿನ್ನ, ಏನೇನೋ ಹೊಸ ಭಾವನೆ
ಹೂವಾಗಿ ಮನಸು, ಏನೇನೋ ಕನಸು, ನಾ ಕಾಣದಾ ಕಲ್ಪನೆ
ಇನ್ನು ನಿನ್ನ ಬಿಡೆನು, ಈ ದೂರ ಸಹಿಸೆನು
ನೀ ಹೇಳದೇ ಬಲ್ಲೆನು, ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣೀ, ನೀ ಹೇಳದೇ ಬಲ್ಲೆನು

ಈ ಅಂದ ಕಂಡು, ನಾ ಮೋಹಗೊಂಡು, ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು, ಕಂಡಾಗ ನವಿಲು, ಕುಣಿವಂತೆ ನನಗಾಯಿತು
ಅಂದೇ ನಿನಗೆ ಸೋತೆ, ನಾ ಜಗವನೆ ಮರೆತೆ

ಈ ಮೌನವಾ ತಾಳೆನು, ಮಾತಾಡೆ ದಾರಿಯ ಕಾಣೆನು
ಓ ರಾಜಾ, ಓ ರಾಣೀ, ಓ ರಾಜಾ, ಓ ರಾಣೀ.

ಚಿತ್ರ: ಮಯೂರ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು:  ರಾಜ್ ಕುಮಾರ್, ಎಸ್. ಜಾನಕಿ


Tag: Ee Mounava Taalenu

ಕಾಮೆಂಟ್‌ಗಳಿಲ್ಲ: