ಗುರುವಾರ, ಸೆಪ್ಟೆಂಬರ್ 5, 2013

ತಂದು ನಾನಿರಿಸಿರುವೆ ಕಡಲೆಬೆಲ್ಲ ಮೋದಕ


ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ
ಭಕ್ತಾವಾಸಂ ಸ್ಮರೇನಿತ್ಯಂ ಆಯುಷ್ಕಾಮಾರ್ಥ ಸಿದ್ಧಯೇತ್

ತಂದು ನಾನಿರಿಸಿರುವೆ ಕಡಲೆಬೆಲ್ಲ ಮೋದಕ
ಬಂದು ನೀ ಸ್ವೀಕರಿಸೋ ವಿನಾಯಕ

ಭಾದ್ರಪದ ಶುಕ್ಲಪಕ್ಷ ಚೌತಿಯ ದಿನವೇ 
ಬಂದು ಎಲ್ಲರಿಗೂ ಮೋದವ ತರುವೆ
ಎಲ್ಲರ ಮನೆಯಲ್ಲೂ ಪೂಜೆಯ ನೀ ಪಡೆವೆ
ಹೊಟ್ಟೆತುಂಬ ಉಂಡು ನೀ ಶುಭಗಳ ತರುವೇ
ಓ ಬೆನಕ ಮಣಿಕನಕ ಇಷ್ಟದಾಯಕ 
ಒಲಿದೂ, ನಲಿದು,
ಒಲಿದು ನಲಿದು ಹರಸು ಬಂದು ಓ ವಿನಾಯಕ
ತಂದು ನಾನಿರಿಸಿರುವೆ ಕಡಲೆಬೆಲ್ಲ ಮೋದಕ
ಬಂದು ನೀ ಸ್ವೀಕರಿಸೋ ವಿನಾಯಕ

ಮಣ್ಣುಮೂರ್ತಿ ರೂಪದಲ್ಲಿ ನಿನ್ನ ಕೂರಿಸಿ,
ಪಂಚಾಮೃತ ನಿನಗೆರೆದು ಸ್ನಾನಮಾಡಿಸಿ,
ಗರಿಕೆ ಹುಲ್ಲು ಮರುಗ ಪತ್ರ ಪುಷ್ಪ ಪೂಜಿಸಿ
ಬೇಲ ತೆಂಗು ದ್ರಾಕ್ಷಿ ಹಣ್ಣು ಫಲ ನಿವೇದಿಸಿ
ಲಂಬೋದರ ಸುರನರಾದಿ ನಿತ್ಯಪೂಜಿತ
ರತ್ನಖಚಿತ ಸಿಂಹಾಸನ ಚಿರವಿರಾಜಿತ 
ತಂದು ನಾನಿರಿಸಿರುವೆ ಕಡಲೆಬೆಲ್ಲ ಮೋದಕ
ಬಂದು ನೀ ಸ್ವೀಕರಿಸೋ ವಿನಾಯಕ

ಪರೀಕ್ಷೆಯ ಎದುರಿಸುವ ವಿದ್ಯಾರ್ಥಿಯೇ ಆಗಲೀ
ಸಂಗೀತದ ಅಭ್ಯಾಸದ ಪ್ರಾರಂಭವೇ ಆಗಲಿ
ದಂಪತಿಗಳ ಬೆಸೆವಂತ ಮದುವೆಯ ಮುನ್ನಾ
ಬೇಸಾಯದ ಆರಂಭದೆ ನೆನೆಯುತ ನಿನ್ನಾ
ಪೂಜಿಸುವ ಭಕ್ತಜನ ಕೋಟಿಗಟ್ಟಲೆ
ಅವರ ಮನದ ಬಯಕೆ ಸಲಿಸು ಬಂದು ಈಗಲೇ
ತಂದು ನಾನಿರಿಸಿರುವೆ ಕಡಲೆಬೆಲ್ಲ ಮೋದಕ
ಬಂದು ನೀ ಸ್ವೀಕರಿಸೋ ವಿನಾಯಕ
ಸ್ವೀಕರಿಸೋ ವಿನಾಯಕ...
ಸ್ವೀಕರಿಸೋ ವಿನಾಯಕ

ಸಾಹಿತ್ಯ: ಆರ್. ಎನ್. ಜಯಗೋಪಾಲ್

Tag: Tandu naanirisiruve kadale bella modaka

ಕಾಮೆಂಟ್‌ಗಳಿಲ್ಲ: