ಭಾನುವಾರ, ಸೆಪ್ಟೆಂಬರ್ 8, 2013

ಪವಡಿಸು ಪಾಲಾಕ್ಷ ಶ್ರೀವಿರೂಪಾಕ್ಷ


ಪವಡಿಸು ಪಾಲಾಕ್ಷ ಶ್ರೀವಿರೂಪಾಕ್ಷ
ಪಂಪಾವತಿಪ್ರೇಮ ಹೃದಯ ನಳಿನಾಕ್ಷ
ಪವಡಿಸು ಪಾಲಾಕ್ಷ ಶ್ರೀವಿರೂಪಾಕ್ಷ

ನವಚೈತ್ರ ಪೌರ್ಣಿಮ ರಮಣೀಯ ರಾತ್ರಿಯಲೀ
ತುಂಗಭದ್ರಾ ತಟದ ಹೇಮಕೂಟಾದ್ರಿಯಲಿ
ಅಂಬುಜಾನನೇ ಮುನಯ ಅನುರಾಗ ಮಂಚದಲಿ
ಗಂಭೀರ ಭಾವನೆಯ ಶೃಂಗಾರ ನಿದ್ರೆಯಲಿ

ವೇದಾದಿಮಾತೆಯ ವಾತ್ಯಲ್ಯ ಶರಧಿಯಲಿ
ವೇದವೇದಾಂತದ ನಾದ ತರಂಗದಲಿ
ಉನ್ನತೋನ್ನತ ಭವ್ಯ ಕೈಲಾಸ ನಗರಿಯಲಿ
ಅಣ್ಣಪ್ಪ ಗುರುವರನ ಏಕಾಂತ ಸ್ನಾನದಲಿ

ಪವಡಿಸು ಪಾಲಾಕ್ಷ ಶ್ರೀವಿರೂಪಾಕ್ಷ
ಪಂಪಾವತಿಪ್ರೇಮ ಹೃದಯ ನಳಿನಾಕ್ಷ
ಪವಡಿಸು ಪಾಲಾಕ್ಷ

ಚಿತ್ರ: ಸತೀಶಕ್ತಿ
ರಚನೆ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ:  ಪಿ. ಲೀಲಾ


Tag: Pavadisu Paalaksha Sri Virupaaksha, Pavadisu Palaksha sree Viroopaaksha

ಕಾಮೆಂಟ್‌ಗಳಿಲ್ಲ: