ಮಂಗಳವಾರ, ಸೆಪ್ಟೆಂಬರ್ 3, 2013

ನಾವು ಬಂದೇವ ಶ್ರೀಶೈಲ ನೋಡದಕ್ಕ


ನಾವು ಬಂದೇವ ಶ್ರೀಶೈಲ ನೋಡದಕ್ಕ


ಹರ ಹರಾ..ಹ..ರಾ
ಅರೇ ಗೀಯ ಗೀಯ ಗಾ
ಗಿಯ ಗೀಯಾ
ಗೀಯ ಗೀಯ
ಗಾ ಗಿಯ ಗೀಯ

ನಾವು ಬಂದೇವ, 
ನಾವು ಬಂದೇವ
ನಾವು ಬಂದೇವ 
ಶ್ರೀ ಶೈಲ ನೋಡೊದಕ್ಕ
ಸ್ವಾಮಿ ಸೇವ ಮಾಡಿ 
ಮತ್ತು ಹೋಗದಕ್ಕ

ಹೇಯ್ ಬೆಟ್ಟದ ಮೇಲೆ ಏರಿ
ಶಿವ ಯಾಕೆ ಕುಂತ
ಅವನಿಗೇನು ಬಂತ
ಅಂತ್ತಾದ್ ಅವನಿಗೇನು ಬಂತ
ಹೂ ಹೇಳಪ್ಪ
ಕೆಟ್ಟ ಜನರ ಮುಖ ನೋಡಬಾರದಂತ ತಾ ತಾ ತಾ ತಾ
ಗೀಯ ಗೀಯ ಗಾ ಗಿಯ ಗೀಯ ಗೀಯ ಗಾ ಗಿಯ ಗೀಯ

ಹೇಯ್ ಹಣ್ಣು ಕಾಯಿ ಧೂಪ ದೀಪ ಇಡತಾರಂತ
ಯಾಕಂತ
ಪುಣ್ಯ ಬರಲಿ ಅಂತ
ಪುಣ್ಯ ಬರಲಿ ಅಂತ
ಕಾಸಿನೊಳಗ ಕೋಟಿ ಪುಣ್ಯ ಬರಲಿ ಅಂತಾ ತಾ ತಾ ತಾ ತಾ
ಗೀಯ ಗೀಯ
ಗಾ ಗಿಯ ಗೀಯ

ಹೇಯ್ ಬಿಕ್ಷುಕ ಬಂದರೆ
ನಿಷ್ಟೂರವಾಗಿ ಹೇಳ್ತಾರಂತ
ಏನಂತ
ಮುಂದಕ್ಕ ಹೋಗಂತ
ಈಗಾಗೊದಿಲ್ಲ
ಮುಂದಕ್ಕ ಹೋಗಂತ
ಬೆಟ್ಟ ಏರಿ ಬಂದಿದ್ರು
ಕೆಟ್ಟ್ ಗುಣ ಹೋಗಲಿಲ್ಲ
ಹುಟ್ಟು ಗುಣ ಸುಟ್ಟಾರು ಹೋಗದಂತಾ ತಾ ತಾ ತಾ ತಾ
ಗೀಯ ಗೀಯ ಗೀಯ

ಹೇಯ್ ಬಾಯಿ ಇದ್ರು ಮೂಕನಾಗಿ
ಕಿವಿ ಇದ್ರು ಕಿವುಡನಾಗಿ
ಸಿವ ಯಾಕೆ ಕುಂತ
ಹೇಳಪ್ಪ
ವರ ಕೇಳತಾರಂತ ತಾ ತಾ ತಾ ತಾ
ಗೀಯ ಗೀಯ ಗಾ ಗಿಯ ಗೀಯ

ಹೇ ಶಿವನ ಒಲಿಸದಕ್ಕ
ಏನು ಮಾಡಬೇಕ
ಹೂ ಹೇಳಪ್ಪ
ಭಕ್ತಿಯೊಂದು ಸಾಕ
ನಮ್ಮಿಂದ ಶಿವನಿಗೇನು ಬೇಕಾ ತಾ ತಾ ತಾ ತಾ
ಗೀಯ ಗೀಯ
ಗಾ ಗಿಯ ಗೀಯ

ಸಾಹಿತ್ಯ: ಮಹಾದೇವ ಬಣಕರ್

Tag: Navu bandeva navu bandeva, navu bandeva shreeshaila nodalikka

ಕಾಮೆಂಟ್‌ಗಳಿಲ್ಲ: