ಶುಕ್ರವಾರ, ಸೆಪ್ಟೆಂಬರ್ 6, 2013

ಈ ಸಂಭಾಷಣೆ ನಮ್ಮ

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ
ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ
ಈ ಸಂಭಾಷಣೆ

ಪ್ರೇಮ ಗಾನ ತದಲಾಸ್ಯ ಮೃದು ಹಾಸ್ಯ
ಶೃಂಗಾರ ಭಾವ ಗಂಗ
ಸುಂದರ ಸುಲಲಿತ ಸುಂದರ ಸುಲಲಿತ
ಮಧುರ ಮಧುರ ಮಧುರ

ಧೀರ ಶರಧಿ ಮೆರೆವಂತೆ ಮೊರೆವಂತೆ
ಹೊಸ ರಾಗ ಧಾರೆಯಂತೆ
ಮಂಜುಳ ಮಧುಮಯ ಮಂಜುಳ ಮಧುಮಯ
ಮಧುರ ಮಧುರ ಮಧುರ

ಚೈತ್ರ ತಂದ ಚಿಗುರಂತೆ ಚೆಲುವಂತೆ 
ಸೌಂದರ್ಯ ಲಹರಿಯಂತೆ
ನಿರ್ಮಲ ಕೋಮಲ ನಿರ್ಮಲ ಕೋಮಲ
ಮಧುರ ಮಧುರ ಮಧುರ

ಚಿತ್ರ: ಧರ್ಮಸೆರೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಉಪೇಂದ್ರಕುಮಾರ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಎಸ್ ಜಾನಕಿTag: Ee Sambhashane namm ee prema sambhashane

ಕಾಮೆಂಟ್‌ಗಳಿಲ್ಲ: